






ಕಾಣಿಯೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಕರ್ತವ್ಯ ನಿರ್ವಹಣೆಗಾಗಿ ನೀಡುವ ಡಿಜಿ & ಐ ಜಿ ಪಿ ಕಮೆಂಡೇಶನ್ ಡಿಸ್ಕ್ -2025-26 ಸಾಲಿನ ಪದಕವನ್ನು ದ ಕ ಜಿಲ್ಲಾ ಪೊಲೀಸ್ ನ ಹೆಡ್ ಕಾನ್ಸ್ಟೇಬಲ್ ಸತೀಶ್ ನೂಜಿ ಚಾರ್ವಾಕ ರವರಿಗೆ ಬೆಂಗಳೂರು ಕೋರಮಂಗಲದ 3ನೇ ಕೆ ಎಸ್ ಆರ್ ಪಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಾದ ಡಾ. ಎಂ.ಎ ಸಲೀಂ ರವರು ಪ್ರಧಾನ ಮಾಡಿರುತ್ತಾರೆ.


ಇವರು ಕಳೆದ 21 ವರ್ಷಗಳಿಂದ ಇಲಾಖೆಯಲ್ಲಿ ಸೇವೆಯಲ್ಲಿದ್ದು, ಇವರು ಸುಳ್ಯ ಪೊಲೀಸ್ ಠಾಣೆ, ಸುಳ್ಯ ವೃತ್ತ ಕಚೇರಿ, ಪುತ್ತೂರು ಡಿವೈಎಸ್ಪಿ ಕಚೇರಿ, ಬಂಟ್ವಾಳ ಎ ಎಸ್ ಪಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಪುತ್ತೂರು ಡಿ ವೈ ಎಸ್ ಪಿ ರವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮೇಲಾಧಿಕಾರಿಗಳ ಅದೇಶಕ್ಕೆ ಬದ್ಧರಾಗಿ ಅಪರಾಧ ಪ್ರಕರಣಗಳ ತನಿಖೆ, ಪೊಲೀಸ್ ಠಾಣೆ ಮತ್ತು ಕಛೇರಿಗಳಲ್ಲಿ ದಾಖಲಾತಿ ನಿರ್ವಹಣೆಯಲ್ಲಿ ತೋರಿದ ಬದ್ಧತೆ, ನಿಷ್ಠೆ ಹಾಗೂ ದಕ್ಷತೆಯನ್ನು ಗುರುತಿಸಿದ ಮೇಲಾಧಿಕಾರಿಗಳ ಶಿಫಾರಸ್ಸಿನಂತೆ ಈ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.













