







ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 144ನೇ ಸರಣಿಯಲ್ಲಿ ಬೆಂಗಳೂರಿನ ಕಲಾವಿದ ವಿದ್ವಾನ್ ಶ್ರವಣ್ ಯು.ಎಂ. ರವರ ವಿಷಯಾಧಾರಿತ ಹಾಗೂ ಸಂಶೋಧನಾತ್ಮಕ ನೃತ್ಯ ಪ್ರಸ್ತುತಿ – ನಾರಾಯಣೀ (ಅಧ್ಯಾಯ ಒಂದು-ಕರ್ಣ) ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.


ಕಾರ್ಯಕ್ರಮಕ್ಕೆ ದ್ವಾರಕಾ ಸಮೂಹ ಸಂಸ್ಥೆಗಳ ಸಹ ನಿರ್ದೇಶಕಿಯಾದ ಅಶ್ವಿನಿ ಗೋಪಾಲಕೃಷ್ಣ ಭಟ್ ರವರು ಅಭ್ಯಾಗತರಾಗಿ ಶುಭ ಹಾರೈಸಿದರು. ದೀಪಕ್ ಕುಮಾರ್ ನಿರ್ವಹಣೆ ಮಾಡಿದರು.













