







ಪುತ್ತೂರು:ಕಲಿಯೋಣ, ಸ್ಪರ್ಧಿಸೋಣ, ದೇಶಪ್ರೇಮ ಮೆರೆಯೋಣ ಎಂಬ ಘೋಷವಾಕ್ಯದೊಂದಿಗೆ ಉದ್ಯಮದಲ್ಲಿ ಉತ್ತಮ ಗುಣಮಟ್ಟ, ಕಡಿಮೆ ಬೆಲೆ, ಗ್ರಾಹಕರ ನಂಬಿಕೆಯನ್ನು ಗಳಿಸಿಕೊಂಡಿರುವ ದರ್ಬೆ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ನಯಾ ಚಪ್ಪಲ್ ಬಜಾರ್ ನಲ್ಲಿ ಈ ಬಾರಿಯೂ 1ನೇ ತರಗತಿಯಿಂದ SSLC ವಿದ್ಯಾರ್ಥಿಗಳಿಗಾಗಿ
” ಸ್ವಾತಂತ್ರೋತ್ಸವ ರಸಪ್ರಶ್ನೆ ಸ್ಪರ್ಧೆ-2026″ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.


ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ 7 ಆಕರ್ಷಕ ಬಹುಮಾನಗಳನ್ನು ಒಳಗೊಂಡಿದೆ. ಉತ್ತರಗಳನ್ನು ಅಂಚೆ ಮೂಲಕ, ಬೈ ಹ್ಯಾಂಡ್ ಮೂಲಕ ನೇರವಾಗಿ ತಂದು ಕೊಡಬಹುದಾಗಿದೆ. ಆಗಸ್ಟ್ 10 ಸಂಜೆ 6 ಗಂಟೆ ಒಳಗೆ ಉತ್ತರ ತಲುಪಿಸತಕ್ಕದ್ದು. ಆಗಸ್ಟ್ 15 ರಂದು ಮಳಿಗೆಯಲ್ಲಿ ಬೆಳಿಗ್ಗೆ ಫಲಿತಾಂಶವಾಗಲಿದ್ದು ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ನಡೆಯಲಿದೆ.



ವಿದ್ಯಾರ್ಥಿಗಳಿಗೆ ಸೂಚನೆಗಳು:
ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಶಾಲೆಯ ಹೆಸರು, ಮೊಬೈಲ್ ಸಂಖ್ಯೆ ಬರೆಯತಕ್ಕದ್ದು, ಪ್ರಶ್ನೆ ಸಂಖ್ಯೆಗೆ ಹೊಂದುವ ಉತ್ತರವನ್ನು ಸ್ಪಷ್ಟವಾಗಿ ಬರೆಯಿರಿ, ಒಂದು ವಿದ್ಯಾರ್ಥಿಗೆ ಒಂದೇ ಉತ್ತರ ಪತ್ರಿಕೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಯಾ ಚಪ್ಪಲ್ ಬಜಾರ್, ಬುಶ್ರಾ ಟವರ್, ಮುಖ್ಯ ರಸ್ತೆ, ಪುತ್ತೂರು – 574201, ಮೊ:9448123569 ಸಂಪರ್ಕಿಸಬಹುದಾಗಿದೆ ಎಂದು ಮಳಿಗೆಯ ಪ್ರಕಟಣೆ ತಿಳಿಸಿದೆ.
ಸ್ಪರ್ಧೆಯ ಪ್ರಶ್ನೆಗಳು.
1)ಭಾರತದ ರಾಷ್ಟ್ರೀಯ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?. 2)ಭಾರತದ ಸಂವಿಧಾನ ಜಾರಿಗೆ ಬಂದ ದಿನ ಯಾವುದು?. 3)ಭಾರತದ ರಾಷ್ಟ್ರ ಲಾಂಛನವನ್ನು ಯಾವ ಐತಿಹಾಸಿಕ ಸ್ತಂಭದಿಂದ ಅಳವಡಿಸಿಕೊಳ್ಳಲಾಗಿದೆ?. 4) ಸ್ವರಾಜ್ ನನ್ನ ಜನ್ಮಸಿದ್ದ ಹಕ್ಕು ಎಂದು ಘೋಷಿಸಿದ ಸ್ವಾತಂತ್ರ್ಯ ಹೋರಾಟಗಾರ ಯಾರು?.5)ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?. 6)ಕರ್ನಾಟಕದ ವೀರರಾಣಿ ಎಂದು ಪ್ರಸಿದ್ಧರಾದವರು ಯಾರು?.7)ಭಾರತದ ರಾಷ್ಟ್ರಧ್ವಜದಲ್ಲಿರುವ ಅಶೋಕ ಚಕ್ರದಲ್ಲಿ ಎಷ್ಟು ಕಡ್ಡಿಗಳಿವೆ?. 8)ಭಾರತ ಬಿಡಿ (Quit India) ಚಳುವಳಿಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು?. 9)ಭಾರತದ ರಾಷ್ಟ್ರಗೀತೆಯನ್ನು ರಚಿಸಿದವರು ಯಾರು?. 10) ಭಾರತದ ರಾಷ್ಟ್ರೀಯ ಗೀತೆ (National Song) ಯಾವುದು?










