ಹಿರಿಯ ಸಾಮಾಜಿಕ ಧುರೀಣ ಪಿ.ಡಿ.ಗಂಗಾಧರ ರೈ ದೇವಸ್ಯ ನಿಧನ

0

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸವಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ದೇವಸ್ಯ( 78 ವ) ಅವರು ಅಗಸ್ಟ್ 1 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಪಿ.ಡಿ. ಗಂಗಾಧರ್ ರೈ ಅವರು ಪ್ರಗತಿಪರ ಕೃಷಿಕರಾಗಿದ್ದರು, ಇವರು ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದು, ಹತ್ತು ಹಲವು ಸಂಘಟನೆಗಳಲ್ಲಿ ದುಡಿದಿದ್ದಾರೆ.

ಮೃತರು ಪತ್ನಿ ಸುವಾಸಿನಿ ರೈ, ಮಕ್ಕಳಾದ ಯುವ ಉದ್ಯಮಿ ಶರತ್ ಕುಮಾರ್ ರೈ ದೇವಸ್ಯ, ಕೃಷಿಕರಾದ ಸನತ್ ಕುಮಾರ್ ರೈ, ಸೊಸೆಯಂದಿರಾದ ವಂದನಾ ಶರತ್, ಶಾಲಿನಿ ಸನತ್ ಹಾಗೂ ಮೊಮ್ಮಕ್ಕಳು ಮತ್ತು ಸಹೋದರರಾದ ಉಡುಪಿಯಲ್ಲಿ ಎಲ್ ಐಸಿ‌ ಸಂಸ್ಥೆಯ ನಿವೃತ್ತ ಉದ್ಯೋಗಿ ವಿಶ್ವನಾಥ ರೈ ದೇವಸ್ಯ, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಪಿ.ಡಿ ಕೃಷ್ಣಕುಮಾರ್ ರೈ ದೇವಸ್ಯ ಹಾಗೂ ಸಹೋದರಿ ಈಶ್ವರಿ ಸುಲಾಯ ಅವರನ್ನು ಅಗಲಿದ್ದಾರೆ. ಪಿ.ಡಿ.ಗಂಗಾಧರ ರೈ ಅವರ ಅಂತ್ಯ ಸಂಸ್ಕಾರ ಅಗಸ್ಟ್ 1 ರಂದು ಮಧ್ಯಾಹ್ನ 12.00 ಕ್ಕೆ ಸ್ವಗೃಹದಲ್ಲಿ ನಡೆಯಲಿದೆ

LEAVE A REPLY

Please enter your comment!
Please enter your name here