







ರಾಮಕುಂಜ: ಶ್ರೀ ಮಹಾಗಣಪತಿ ಸೇವಾ ಸಮಿತಿ ಕೊಯಿಲ-ರಾಮಕುಂಜ ಇದರ ವತಿಯಿಂದ ನಡೆಯುವ ೪೬ನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಅಶೋಕ್ ಕೊಯಿಲ ಹಾಗೂ ಕಾರ್ಯದರ್ಶಿಯಾಗಿ ಹರ್ಷಿತ್ ಉರ್ಕ ಆಯ್ಕೆಗೊಂಡಿದ್ದಾರೆ.


ಇತ್ತೀಚೆಗೆ ನಡೆದ ಶ್ರೀ ಮಹಾಗಣಪತಿ ಸೇವಾ ಸಮಿತಿ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು.



ಗೌರವಾಧ್ಯಕ್ಷರಾಗಿ ಶರತ್ ಕೆದಿಲ, ಸಂಚಾಲಕರಾಗಿ ಗುರುಪ್ರಸಾದ್ ರಾಮಕುಂಜ, ಉಪಾಧ್ಯಕ್ಷರಾಗಿ ಜೀವನ್ ಶೆಟ್ಟಿ ಪಡಿಪಿರೆ, ಕಿನ್ನಿಗ ರಾಮಕುಂಜ, ಪರಮೇಶ್ವರ ಸಬಳೂರು, ಜತೆಕಾರ್ಯದರ್ಶಿಯಾಗಿ ರಮೇಶ್ ಸಂಪ್ಯಾಡಿ, ಸುದೀಶ್ ಪಟ್ಟೆ, ಕೋಶಾಧಿಕಾರಿಯಾಗಿ ಉಮೇಶ್ ಪಾದೆ, ಕ್ರೀಡಾ ಕಾರ್ಯದರ್ಶಿಯಾಗಿ ವಿಶ್ವನಾಥ ರಾಮಕುಂಜ, ಚೇತನ್ ಹಲ್ಯಾರ, ಸಚಿನ್ ಕಾಜರುಕ್ಕು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಶೋಕ್ ಕೊಂಬೆಟ್ಟು, ಕೀರ್ತನ್ ಉರ್ಕ, ಕೇಶವ ಉರ್ಕ, ಗೌರವ ಸಲಹೆಗಾರರಾಗಿ ದಿವಾಕರ ರಾವ್ ಪಂಚವಟಿ, ಧರ್ಮಪಾಲ ರಾವ್ ಕಜೆ, ಲಕ್ಷ್ಮೀನಾರಾಯಣ ರಾವ್ ಆತೂರು, ಸುಬ್ರಹ್ಮಣ್ಯ ರಾವ್ ಆತೂರು, ಪದ್ಮಪ್ಪ ಗೌಡ ರಾಮಕುಂಜ, ಪೂವಪ್ಪ ಸಂಪ್ಯಾಡಿ, ಯದುಶ್ರೀ ಆನೆಗುಂಡಿ, ಬಾಲಾಜಿ ಶೆಟ್ಟಿ ಕುಂಡಾಜೆ, ಸುನೀತ್‌ರಾಜ್ ಶೆಟ್ಟಿ ಆರ್‍ವಾರ, ಶಿವಪ್ರಸಾದ್ ಇಜ್ಜಾವು, ಪ್ರಶಾಂತ್ ಆರ್.ಕೆ., ಯೋಗೀಶ್ ಅಜ್ಜಿಕುಮೇರ್, ಸದಾಶಿವ ಶೆಟ್ಟಿ ಮಾರಂಗ, ಶಿವರಾಮ ಭಟ್ ಕಂಪ, ಹರೀಶ್ ಬರಮೇಲು ಆಯ್ಕೆಯಾಗಿದ್ದಾರೆ.










