






ಪುತ್ತೂರು: ತುಳುನಾಡಿನ ಪ್ರತಿಷ್ಠಿತ ಬಿಲ್ಲವ ತರವಾಡು ಮನೆಗಳಲ್ಲಿ ಒಂದಾಗಿರುವ ಮಡ್ಯೂಟ್ಟು ತರವಾಡು ಮನೆಯಲ್ಲಿ ಆಟಿ ಅಗೆಲು ಕಾರ್ಯಕ್ರಮದೊಂದಿಗೆ ಶೈಕ್ಷಣಿಕವಾಗಿ ಸಾಧನೆ ಮಾಡಿದ ಕುಟುಂಬದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಆ.02ರಂದು ನಡೆಯಿತು.


ಕುಟುಂಬದ ಯಜಮಾನರಾದ ಪೂವಪ್ಪ ಪೂಜಾರಿ ಸಸ್ಪೆಟಿ ಸನ್ಮಾನಿಸಿದರು. ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷಯಲ್ಲಿ[ಕೆ-ಸೆಟ್] ಪತ್ರಿಕೋದ್ಯಮ ವಿಷಯದಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿರುವ ಅರ್ಚನಾ ಎಸ್ ಬೆಂಗಳೂರು. ಮಂಗಳೂರು ವಿ.ವಿ ನಡೆಸಿದ 2024-25ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ಬಿ.ಎಸ್ಸಿ ಅನಿಮೇಷನ್ ಮತ್ತು ದೃಶ್ಯ ಪರಿಣಾಮಗಳು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುವ ಪೂರ್ಣಾ ಸಿ ಮಂಗಳೂರು ಮತ್ತು 2025-26ನೇ ದ್ವಿತೀಯ ಪಿಯುಸಿಯಲ್ಲಿ 90% ಅಂಕಗಳನ್ನು ಗಳಿಸಿದ ಗ್ರೀಷ್ಮಾ ಬಿ ವಿ ವಿರಾಜಪೇಟೆ ಇವರನ್ನು ಸನ್ಮಾನಿಸಲಾಯಿತು













