






1,97,642.69 ರೂ. ಲಾಭ | ಶೇ.12 ಡಿವಿಡೆಂಡ್ | ಲೀ.ಗೆ 75 ಪೈಸೆ ಬೋನಸ್


ಪುತ್ತೂರು: ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಮಹಾಸಭೆ ಆ.1ರಂದು ಸಂಘದ ವಠಾರದಲ್ಲಿ ನಡೆಯಿತು. ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಮೊಕ್ತೇಸರ ವಿನೋದ್ ಕುಮಾರ್ ರೈ ಬೆಟ್ಟಂಪಾಡಿಗುತ್ತು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.



ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೊಮ್ಮಂಡ ಕರುಣಾಕರ ಶೆಟ್ಟಿ ಸ್ವಾಗತಿಸಿ ಮಾತನಾಡಿ, ಸಂಘದಲ್ಲಿ 219 ಮಂದಿ ಸದಸ್ಯರಿದ್ದು 61,420 ಪಾಲು ಬಂಡವಾಳ ಇರುತ್ತದೆ. ಸಂಘವು “ಎ” ಶ್ರೇಣಿಯನ್ನು ಹೊಂದಿದೆ. 2025-26ನೇ ಸಾಲಿನಲ್ಲಿ 65 ಸದಸ್ಯರಿಂದ 1,25,244 ಲೀ. ಹಾಲು ಖರೀದಿ ಮಾಡಲಾಗಿದೆ. ವರದಿ ಸಾಲಿನಲ್ಲಿ ಒಟ್ಟು 1,97,642.69 ರೂ. ಲಾಭ ಬಂದಿದ್ದು ಸದಸ್ಯರಿಗೆ ಶೇ.12 ಡಿವಿಡೆಂಡು ಹಾಗೂ ಲೀ.ಗೆ 75 ಪೈಸೆ ಬೋನಸ್ ನೀಡಲಾಗುವುದು ಎಂದರು. ಸಂಘದ ಮುಂದಿನ ಕಾರ್ಯಯೋಜನೆ, ಅಭಿವೃದ್ಧಿ ಕೆಲಸಗಳ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.

ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾರವರು ವಾರ್ಷಿಕ ಲೆಕ್ಕಪತ್ರ ಹಾಗೂ ಅನುಪಾಲನಾ ವರದಿ ಮಂಡಿಸಿ ಮಾತನಾಡಿ ಬೆಟ್ಟಂಪಾಡಿ ಸಂಘಕ್ಕೆ ಹಲವು ಬಾರಿ ಬಂದಿದ್ದೇನೆ. ಆದರೆ ಇದು ನನಗೆ ಮೊದಲನೆ ಮಹಾಸಭೆ. ಈ ಸಂಘದಲ್ಲಿ ಲೆಕ್ಕಪತ್ರ ವ್ಯವಹಾರಗಳು ಉತ್ತಮವಾಗಿದೆ ಎಂದು ಹೇಳಿ ಶ್ಲಾಘಿಸಿದರು. ಸದಸ್ಯರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಿ. ಇದರಿಂದ ಫ್ಯಾಟ್ ಹೆಚ್ಚಾಗಿ ನಿಮಗೂ ಸಂಘಕ್ಕೂ ಲಾಭ ದೊರೆಯುತ್ತದೆ. ಜಾನುವಾರುಗಳಿಗೆ ನಂದಿನಿ ಪಶು ಆಹಾರವನ್ನೇ ನೀಡಿ. ಇದರಿಂದ ಹಾಲಿನ ಇಳುವರಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಸಂಘಕ್ಕೂ ಲಾಭ ದೊರೆಯುತ್ತದೆ. ಅಲ್ಲದೆ ಸೈಲೇಜ್, ಲವಣಮಿಶ್ರಣಗಳನ್ನು ಕೂಡ ಬಳಕೆ ಮಾಡಿ ಎಂದ ಅವರು ಹೆಚ್ಚು ನಂದಿನಿ ಪಶುಆಹಾರ ಬಳಕೆ ಮಾಡುವ ಹೈನುಗಾರರಿಗೂ ಬಹುಮಾನ ಕೊಡುವ ಯೋಜನೆ ಹಾಕಿಕೊಳ್ಳಿ. ಮಹಾಸಭೆಗೆ ಆಗಮಿಸಿದ ಹೈನುಗಾರರಿಗೆ ಮಾತ್ರ ಪ್ರೋತ್ಸಾಹಕ ಬಹುಮಾನ ನೀಡಿ ಎಂದರು. ಒಕ್ಕೂಟದಿಂದ ಹೈನುಗಾರರಿಗೆ ಲಭ್ಯವಿರುವ ಮಿನಿಡೈರಿ ಯೋಜನೆ, ಹಟ್ಟಿ ತೊಳೆಯುವ ಯಂತ್ರ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ಗಳಿಗೆ ಸಿಗುವ ಸಹಾಯಧನಗಳ ಮಾಹಿತಿ ನೀಡಿ ಪ್ರಯೋಜನ ಪಡೆಯುವಂತೆ ಹೇಳಿದರು.
ಒಕ್ಕೂಟದ ಡಾ. ಅನುದೀಪ್ರವರು ಮಾತನಾಡಿ ಹೈನುಗಾರಿಕೆಯಲ್ಲಿ ಉತ್ತಮ ತಳಿಯ ಹಸುಗಳನ್ನು ಸಾಕಬೇಕು. ಇದರಿಂದ ಹಾಲಿನ ಇಳುವರಿ ಹೆಚ್ಚಾಗುತ್ತದೆ. ಕರು ಸಾಕಾಣಕೆ ಹಾಗೂ ಗಡಸು ಸಾಕಾಣಿಕೆ ಯೋಜನೆ ಇದೆ. ಗಡಸು ಸಾಕಾಣಿಕೆಯಲ್ಲಿ ರೂ.1ಸಾವಿರದಂತೆ ವರ್ಷಕ್ಕೆ 12 ಸಾಇರ ರೂ ದೊರೆಯುತ್ತದೆ. ಕನಿಷ್ಠ 10 ಗಡಸುಗಳನ್ನು ಸಾಕಬೇಕು. ಪ್ರಸ್ತುತ ಸಾಲಿನಲ್ಲಿ ಜಾನುವಾರು ವಿಮೆ ಮೊತ್ತ ಕಡಿಮೆ ಆಗಿದೆ. ಹೈನುಗಾರರು ಹಸುಗಳಿಗೆ ಇಮೆ ಮಾಡಿಸಿಕೊಳ್ಳಿ. ಹೆಣ್ಣು ಕರು ಇಂಜಕ್ಷನ್ ಲಭ್ಯವಿದೆ ಎಂದು ಹೇಳಿ ಸೌಲಭ್ಯಗಳ ಪ್ರಯೋಜನ ಪಡೆಯುವಂತೆ ಹೇಳಿದರು.
sಸಂಘದ ಕಾರ್ಯದರ್ಶಿ ಸತೀಶ್ ರೈ 2025-26ನೇ ಸಾಲಿನ ವರದಿ ವಾಚಿಸಿದರು. 2026-27ನೇ ಸಾಲಿನ ಅಂದಾಜು ಆಯ-ವ್ಯಯ, 2025-26ನೇ ಸಆಲಿನ ಅಂದಾಜು ಆಯವ್ಯಯಕ್ಕಿಂತ ಹೆಚ್ಚಿನ ವೆಚ್ಚಗಳನ್ನು ಮಂಡಿಸಿ ಮಂಜೂರಾತಿ ಪಡೆದರು.
ಸನ್ಮಾನ:
ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ನಿರ್ದೇಶಕರು ಹಾಗೂ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರೂ ಆಗಿರುವ ಶರತ್ ಕುಮಾರ್ ಪಾರರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ಅನಿತಾ ತಿಮ್ಮಪ್ಪ ನಾಯ್ಕ, ನಿರ್ದೇಶಕರುಗಳಾದ ಎಂ. ಶೇಷಪ್ಪ ರೈ, ಸದಾನಂದ ರೈ ಮೊದೆಲ್ಕಾಡಿ, ಆನಂದ ಗೌಡ, ಪ್ರಭಾಕರ ರೈ, ಸೂರ್ಯನಾರಾಯಣ ಭಟ್ ಪಾರ, ಪ್ರಮೋದ್ ಕುಮಾರ್ ರೈ ಬರೆ, ದೇವಕಿ ದೇವಿ, ಕುಸುಮ ಎಸ್., ಎಂ., ಕೇಶ ನಾಯ್ಕ, ಜಯಂತಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಅನಿತಾ ತಿಮ್ಮಪ್ಪ ನಾಯ್ಕ ಪ್ರಾರ್ಥಿಸಿ ನಿರ್ದೇಶಕ ಶರತ್ ಕುಮಾರ್ ಪಾರ ವಂದಿಸಿದರು. ಸಿಬ್ಬಂದಿಗಳಾದ ಉಚಿತ್ ಕುಮಾರ್ ಹಾಗೂ ಕೃಷ್ಣ ಮಣಿಯಾಣಿ ಸಹಕರಿಸಿದರು. ಸಂಘದ ಮಾಜಿ ಅಧ್ಯಕ್ಷ ರಂಗನಾಥ ರೈ ಗುತ್ತು, ಮಾಜಿ ನಿರ್ದೇಶಕ ಜಗನ್ನಾಥ ರೈ ಕೊಮ್ಮಂಡ, ಸದಸ್ಯರುಗಳಾದ ದೇರಣ್ಣ ರೈ ತಲೆಪ್ಪಾಡಿ, ಸೀತಾರಾಮ ಗೌಡ ಮಿತ್ತಡ್ಕ, ಸಂತೋಷ್ ರೈ ಗುತ್ತು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅತೀ ಹೆಚ್ಚು ಹಾಲು ಪೂರೈಸಿದ ಹೈನುಗಾರರಿಗೆ ಸನ್ಮಾನ-ಪ್ರೋತ್ಸಾಹಕ ಬಹುಮಾನ
2025-26ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು. 7085.3 ಲೀ. ಹಾಲು ಪೂರೈಸಿ ಪ್ರಥಮ ಸ್ಥಾನ ಪಡೆದ ಸಂಘದ ನಿರ್ದೇಶಕ ಆನಂದ ಗೌಡ, 6417.5 ಲೀ. ಹಾಲು ಪೂರೈಸಿ ದ್ವಿತೀಯ ಸ್ಥಾನ ಪಡೆದ ಸದಸ್ಯ ದೇರಣ್ಣ ರೈ ತಲೆಪ್ಪಾಡಿ ಹಾಗೂ 6306.5 ಲೀ. ಹಾಲು ಪೂರೈಸಿ ತೃತೀಯ ಸ್ಥಾನ ಪಡೆದ ಉಪಾಧ್ಯಕ್ಷೆ ಅನಿತಾ ತಿಮ್ಮಪ್ಪ ನಾಯ್ಕರವರನ್ನು ಬಹುಮಾನ ನೀಡಿ ಶಾಲು ಹೊದೆಸಿ ಸನ್ಮಾನಿಸಲಾಯಿತು.2025-26ನೇ ಸಾಲಿನಲ್ಲಿ 200ಲೀ.ಗಿಂತ ಅಧಿಕ ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.










