






ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಶಾಲಾ ಹಬ್ಬ ಮಾಯ್ ದೆ ದೇವುಸ್ ಸಭಾಂಗಣದಲ್ಲಿ ನೆರವೇರಿತು. ಮಾಯ್ ದೆ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ಹಾಗೂ ಶಾಲಾ ಸಂಚಾಲಕರಾದ ವಂ|ಡಾ|ಜೆ.ಬಿ ಸಲ್ದಾನರವರು ಬಲಿಪೂಜೆ ನೆರವೇರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಚರ್ಚ್ನ ಸಹಾಯಕ ಧರ್ಮಗುರು ವಂ|ವಿವಿಯನ್ ನಿಶಾಂತ್ ರೋಡ್ರಿಗಸ್, ವಂ|ಪ್ರವೀಣ್ ಮರ್ವಿನ್ ಲೋಬೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಷನ್ ಲಸ್ರಾದೊ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ರಶ್ಮಿ ರಾಜೇಶ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ನಿವೃತ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕು| ಹಿನಾ, ಕು| ತಸ್ವಿ, ಕು| ಯುವಿಕ ಕಾರ್ಯಕ್ರಮ ನಿರೂಪಿಸಿದರು. ಆರಾದ್ಯ, ಸ್ವಲಾಹ್, ಅಹನ್ ಜೈನ್ ಸ್ವಾಗತಿಸಿದರು. ಸೈಂಟ್ ವಿಕ್ಟರ್ಸ್ ಡೇ ಮಹತ್ವವನ್ನು ಖುಷಿ, ಕ್ಲೆರಿಸ್ಸಾ, ವಿನ್ಸ್ಟನ್ ವಿವರಿಸಿದರು. ರಾಶಿ ಶೆಟ್ಟಿ ಹಾಗೂ ಸೃಷ್ಟಿ ವಂದಿಸಿದರು.













