ಆಲಂತಾಯ: ತುಳು ಸಂಸ್ಕೃತಿಯ ಸೊಬಗು ಸಾರಿದ ‘ಆಟಿಡೊಂಜಿ ದಿನ’ ಸಂಭ್ರಮ

0

ನೆಲ್ಯಾಡಿ: ಎಸ್‌ಡಿಎಂಸಿ, ಪೂರ್ವ ವಿದ್ಯಾರ್ಥಿ ಸಂಘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲಂತಾಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಆಲಂತಾಯ ಒಕ್ಕೂಟ ಹಾಗೂ ಶಾಲಾ ಪೋಷಕರ ಸಹಕಾರದೊಂದಿಗೆ ಆಟಿಡೊಂಜಿ ದಿನ ಆ.2ರಂದು ಆಲಂತಾಯ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಆಟಿಡೊಂಜಿ ದಿನ ತುಳು ಸಂಸ್ಕೃತಿಯ ಸೊಬಗು ಸಾರಿತು. ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ನವೀನ್ ಭಂಡಾರಿ ಅವರು, ತುಳು ಸಂಸ್ಕೃತಿ, ಪರಂಪರೆ ಹಾಗೂ ಆಟಿ ತಿಂಗಳ ವೈಶಿಷ್ಟ್ಯ ಮತ್ತು ಮಹತ್ವವನ್ನು ವಿವರಿಸಿದರು. ನಮ್ಮ ನೆಲದ ಸಾಂಪ್ರದಾಯಿಕ ಆಚರಣೆಗಳು ಮತ್ತು ಆಹಾರ ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಮಹತ್ವದ್ದಾಗಿದೆ ಎಂದರು.


ಟಾಟಾ ಪವರ್ ಕಂಪನಿಯ ರಕ್ಷಿತ್, ದವಳಗಿರಿ ಕನ್‌ಸ್ಟ್ರಕ್ಷನ್‌ನ ಮಾಲಕರಾದ ಮನೋಹರ್ ಕೆಳೆಂಜಿರೋಡಿ, ಪ್ರಶಾಂತ್ ರೈ ಅರಂತಬೈಲು, ಎಸ್‌ಡಿಎಂಸಿ ಅಧ್ಯಕ್ಷರಾದ ಅಶೋಕ್ ಸಿ.ಬಿ., ಸದಸ್ಯ ಚಂದ್ರಶೇಖರ್, ರಂಜಿತ್ ಜೈನ್ ಮೇಲೂರು, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಸುಂದರ್ ಪಾಲೇರಿ, ಉಪಾಧ್ಯಕ್ಷರು, ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಆಟಿ ತಿಂಗಳ ಮಹತ್ವ ಹಾಗೂ ತುಳು ಸಾಂಸ್ಕೃತಿಕ ಪರಂಪರೆಯನ್ನು ನೃತ್ಯ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಮನೋಜ್ಞವಾಗಿ ಅನಾವರಣಗೊಳಿಸಿದರು. ವಿಶೇಷವಾಗಿ ಆಟಿ ತಿಂಗಳಲ್ಲಿ ತಯಾರಿಸಲಾಗುವ ವಿವಿಧ ಸಾಂಪ್ರದಾಯಿಕ ಆಹಾರಗಳ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಶಾಲಾ ಮುಖ್ಯ ಶಿಕ್ಷಕಿ ಲವ್ಲಿ ಜೋಸ್ ಅವರ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಕ ವೃಂದದ ಸಹಕಾರದೊಂದಿಗೆ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ಪೋಷಕರು ಹಾಗೂ ವಿದ್ಯಾರ್ಥಿಗಳ ಸಕ್ರಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

LEAVE A REPLY

Please enter your comment!
Please enter your name here