







ಪುತ್ತೂರು: ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಒಕ್ಕೂಟ (ರಿ) ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಅಯೋಧ್ಯಾ, ಉತ್ತರ ಪ್ರದೇಶ ಇವರ ವತಿಯಿಂದ ಶ್ರೀ ಬಾಲರಾಮ ಮಂದಿರದಲ್ಲಿ ಏರ್ಪಡಿಸಲಾದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಸರಣಿ ಸಾಂಸ್ಕೃತಿಕ ಸೇವಾ ಕಾರ್ಯಕ್ರಮದ ಅಂಗವಾಗಿ 01/08/2026 ಶನಿವಾರ ಸಂಜೆ 5 ಗಂಟೆಗೆ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಿತು.



ಈ ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಇದರ ನೃತ್ಯಗುರು ವಿದುಷಿ ಶ್ರೀಮತಿ ರೋಹಿಣಿ ಉದಯ್ ಮತ್ತು ಅವರ ಬಿ.ಸಿ.ರೋಡ್ ಶಾಖೆಯ ಶಿಷ್ಯೆಯರು “ನೃತ್ಯ ರಂಜನಿ” ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.



ಭಕ್ತಿ ಮತ್ತು ಕಲಾತ್ಮಕತೆಯಿಂದ ಕೂಡಿದ ನೃತ್ಯ ಪ್ರದರ್ಶನವು ಉಪಸ್ಥಿತರಿದ್ದ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಯಿತು. ಶ್ರೀ ರಾಮನ ಸನ್ನಿಧಿಯಲ್ಲಿ ಪುತ್ತೂರಿನ ಕಲಾವಿದರಿಗೆ ಪ್ರದರ್ಶನ ನೀಡುವ ಅವಕಾಶ ದೊರೆತಿದ್ದು ಸಂಘಟಕರಿಗೆ ಮತ್ತು ಕಲಾ ಕೇಂದ್ರದ ಗುರು-ಶಿಷ್ಯೆಯರಿಗೆ ಹೆಮ್ಮೆಯ ಕ್ಷಣವಾಯಿತು.ಕಾರ್ಯಕ್ರಮವು ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ನೇತೃತ್ವದಲ್ಲಿ ನಡೆಯಿತು.










