ತಾಲೂಕು ಮಟ್ಟದ ಕರಾಟೆ ಪಂದ್ಯಾಟ : ರೆಂಜಿಲಾಡಿ ಸ್ಯಾಂತೋಮ್ ವಿದ್ಯಾನಿಕೇತನ ಆ.ಮಾ.ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

0

ನೆಲ್ಯಾಡಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 2026-27ನೇ ಸಾಲಿನ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ- ಬಾಲಕಿಯರ ಕರಾಟೆ ಸ್ಪರ್ಧೆಯಲ್ಲಿ ರೆಂಜಿಲಾಡಿ ಸ್ಯಾಂತೋಮ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಮಾಡಿದ್ದಾರೆ.


ಪಂದ್ಯಾಟದಲ್ಲಿ ಭಾಗವಹಿಸಿದ್ದ ಸ್ಯಾಂತೋಮ್ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ನಾಲ್ಕು ಚಿನ್ನ, ಒಂದು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. 14 ವರ್ಷದೊಳಗಿನ ಬಾಲಕಿಯರ 50 ಕೆಜಿ ವಿಭಾಗದಲ್ಲಿ 8ನೇ ತರಗತಿಯ ಹಂಸಿಕಾ ಎಚ್., 7ನೇ ತರಗತಿಯ ಇವಾನ ಸಜಿ, ಬಾಲಕರ 30 ಕೆ.ಜಿ.ವಿಭಾಗದಲ್ಲಿ 7ನೇ ತರಗತಿಯ ದಿಶಾನ್ ಎಸ್., 25 ಕೆ.ಜಿ.ವಿಭಾಗದಲ್ಲಿ 7ನೇ ತರಗತಿಯ ಶಿಖರ್ ಎಸ್. ಚಿನ್ನದ ಪದಕ ಪಡೆದುಕೊಂಡಿದ್ದಾರೆ. 14 ವರ್ಷದೊಳಗಿನ ಬಾಲಕರ 50 ಕೆ.ಜಿ.ವಿಭಾಗದಲ್ಲಿ ೭ನೇ ತರಗತಿಯ ಶಮಾಝ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.


ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರು, ಮುಖ್ಯಗುರುಗಳು, ಅಧ್ಯಾಪಕರು, ಆಡಳಿತ ಮಂಡಳಿ, ಕರಾಟೆ ತರಬೇತುದಾರರು ಹಾಗೂ ಪೋಷಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here