







ಹಿರೇಬಂಡಾಡಿ: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಶಿವನಗರ ಮತ್ತು ಮಂಜುಶ್ರೀ ಸೇವಾ ಟ್ರಸ್ಟ್, ಮಂಜುಶ್ರೀ ಭಜನಾ ಮಂದಿರ ಶಿವನಗರ ಹಿರೇಬಂಡಾಡಿ ಇದರ ಆಶ್ರಯದಲ್ಲಿ ನಡೆಯುವ 9ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಮಂಜುಶ್ರೀ ಭಜನಾ ಮಂದಿರದಲ್ಲಿ ನಡೆಯಿತು.


ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶಶಿಕಲಾ ಪಡ್ಯೊಟ್ಟು, ಕಾರ್ಯದರ್ಶಿ ಪವಿತ್ರ ಪಡೀಲು, ಮಂಜುಶ್ರೀ ಸೇವಾ ಟ್ರಸ್ಟ್‌ನ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ನಾಕ್ ಮುರದಮೇಲು, ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಸದಸ್ಯರು, ಸೇವಾ ಟ್ರಸ್ಟ್‌ನ ಸದಸ್ಯರು, ಭಜನಾಮಂದಿರದ ಸದಸ್ಯರು ಉಪಸ್ಥಿತರಿದ್ದರು.













