ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ

0

ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ನಡೆಯಿತು.

ಅಲೀಫ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅಶ್ರಫ್ ಶಾ ಮಾಂತೂರ್ ಅಧ್ಯಕ್ಷತೆ ವಹಿಸಿ ಚುನಾಯಿತ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಟ್ರಸ್ಟ್ ಸದಸ್ಯರಾದ ಪುತ್ತುಬಾವ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ನಾಯಕತ್ವದ ಪರಿಕಲ್ಪನೆಯ ಕುರಿತು ಮಾತನಾಡಿ ಪ್ರತಿಜ್ಞಾ ಬೋಧನೆಯನ್ನು ಪ್ರಾಂಶುಪಾಲ ರಂಝಿ ಮುಹಮ್ಮದ್ ನಡೆಸಿದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ ಸವಣೂರು, ಕೋಶಾಧಿಕಾರಿ ನಿಝಾರ್ ದರ್ಬೆ, ಉಪಪ್ರಾಂಶುಪಾಲ ಅಝ್ಹರ್ ಅವರು ವಿದ್ಯಾರ್ಥಿ ನಾಯಕರ ಜವಾಬ್ದಾರಿ, ನಾಯಕತ್ವ, ಶಿಸ್ತು ಮತ್ತು ಸೇವಾ ಮನೋಭಾವದ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು. ಮೌಲ್ಯ ಶಿಕ್ಷಣದ ಮುಖ್ಯ ಶಿಕ್ಷಕರಾದ ಡಾ. ನಿಝಾಮುದ್ದೀನ್ ಝೈನಿ ಉಸ್ತಾದ್, ಶೈಕ್ಷಣಿಕ ಸಂಯೋಜಕಿ ಹರ್ಷಿತಾ, ಇ.ಸಿ.ಸಿ.ಇ ಸಂಯೋಜಕಿ ಶೃತಿ ಶೆಟ್ಟಿ, ಶಾಲಾ ಚುನಾವಣಾ ಆಯುಕ್ತೆ ಉಬೈದಾ ಶಹರ್ ಬಾನು ಹಾಗೂ ಮೇಲ್ವಿಚಾರಕರಾದ ಇಬ್ರಾಹಿಂ ಉಪಸ್ಥಿತರಿದ್ದರು.

ಶಾಲಾ ನಾಯಕನಾಗಿ ಮುಹಮ್ಮದ್ ನಿಹಾದ್, ನಾಯಕಿಯಾಗಿ ಫಾತಿಮಾ ಶಝ, ಉಪನಾಯಕನಾಗಿ ಮುಹಮ್ಮದ್ ಅಫ್ರಾಝ್ ,ಉಪನಾಯಕಿಯಾಗಿ ಐಫಾ ಫಾತಿಮಾ, ಶಿಸ್ತು ಸಮಯಪಾಲನ ಸಚಿವರುಗಳಾಗಿ ಮುಹಮ್ಮದ್ ಶಾಹಿಕ್, ಆಯಿಷಾ ಬಿ.ಎಚ್ , ಆರೋಗ್ಯ ಸಚಿವರುಗಳಾಗಿ ಹಸನ್ ಸಹಾದ್, ಆಸಿಯಾ ನಿಯಾಬಾ, ಸಾಂಸ್ಕೃತಿಕ ಸಚಿವರುಗಳಾಗಿ ಮುಹಮ್ಮದ್ ಜಲಾಲ್, ರಿದಾ ಫಾತಿಮಾ ಹಾಗೂ ಕ್ರೀಡಾ ಸಚಿವರುಗಳಾಗಿ ಮುಹಮ್ಮದ್ ಅಹ್ಸಾನ್, ನಿದಾ ಫಾತಿಮಾ ಹಾಗೂ ಎಮೆರಾಲ್ಡ್ ತಂಡದ ನಾಯಕರುಗಳಾಗಿ ಅಫ್ರಾಝ್, ಫಾತಿಮಾ ಫಿದಾ, ಡೈಮಂಡ್ ತಂಡದ ನಾಯಕರುಗಳಾಗಿ ಮುಹಮ್ಮದ್ ರಾಫಿಲ್, ಶಝ್ಮಿ ಫಾತಿಮಾ, ಎಲೆಕ್ಟ್ರಮ್ ತಂಡದ ನಾಯಕರುಗಳಾಗಿ ಮುಹಮ್ಮದ್ ಶಫಿಲ್, ಆಯಿಷಾ ಶಿಝ, ನೆಕರ್ ತಂಡದ ನಾಯಕರುಗಳಾಗಿ ಸ್ವಫಾಫ್ ಫಾತಿಮಾ ಸಹಿದಾ ಪ್ರತಿಜ್ಞಾ ಬೋಧನೆಯನ್ನು ಸ್ವೀಕರಿಸಿದರು. ಚುನಾವಣಾ ಜಾಗೃತಿಗಾಗಿ ನಡೆಸಲಾದ ಸ್ಪರ್ಧೆಗಳ ಬಹುಮಾನಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಉಬೈದಾ ಶಹರ್ ಬಾನು ಸ್ವಾಗತಿಸಿದರು. ಖಾಲಿಸ ವಂದಿಸಿದರು. ನಾದಿಯಾ ನಿರೂಪಿಸಿದರು.

LEAVE A REPLY

Please enter your comment!
Please enter your name here