







ರಾಮಕುಂಜ: ಮಂಗಳೂರು ಆಕಾಶವಾಣಿಯಲ್ಲಿ ಆ.9ರಂದು ಬೆಳಿಗ್ಗೆ 8.30ಕ್ಕೆ ಪ್ರಸಾರಗೊಳ್ಳಲಿರುವ ಅರುಣ್ ಭಂಡಾರಿ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಪ್ರಾಯೋಜಕತ್ವದ ವಾರದ ಅತಿಥಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ಹಾಗೂ ಸಮಾಜ ಸೇವಕರಾದ ನಾರಾಯಣ ಭಟ್ ಟಿ ರಾಮಕುಂಜ ಭಾಗವಹಿಸಲಿದ್ದಾರೆ. ಆಕಾಶವಾಣಿಯಲ್ಲಿ ರಾಜ್ಯ ವ್ಯಾಪಿ ಪ್ರಸಾರ ಅದೇ ಹೊತ್ತಿಗೆ ಇದ್ದರೆ 9.10ಕ್ಕೆ ವಾರದ ಅತಿಥಿ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.












