







ಪುತ್ತೂರು: ವಿಶ್ವಕರ್ಮ ಯುವಮಿಲನ್ (ರಿ.) ಪುತ್ತೂರು ತಾಲೂಕು ವಲಯ ಇದರ ಆಶ್ರಯದಲ್ಲಿ ವಿಶ್ವಕರ್ಮ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆಗಳು ಕೆಸರ್‌ಡ್ ಒಂಜಿ ದಿನ ಹಾಗೂ ಸಾರ್ವಜನಿಕ ಸೇವೆಗಾಗಿ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಆ.9ರಂದು ಪುತ್ತೂರು ಹಾರಾಡಿ, ರೈಲ್ವೇ ರಸ್ತೆಯ ಭಾರತ್ ಆಟೋ ಕಾರ್ಸ್ ಬಳಿ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಗದ್ದೆಗೆ ಹಾಲೆರೆಯುವ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಲಾಗುವುದು.


ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಯುವ ಮಿಲನ್ ರಾಜ್ಯಾಧ್ಯಕ್ಷ ವಿಕ್ರಂ ಐ. ಆಚಾರ್ಯ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಯಾಗಿ ಶಾಸಕ ಅಶೋಕ್ ಕುಮಾರ್ ರೈ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಸುಜ್ಞಾನಮೂರ್ತಿ ಪಿ. ಆಗಮಿಸಲಿದ್ದಾರೆ. ಬಾರ್ಕೂರು, ನವಾಕ್ಷರಿ ದಾಮೋದರ ಶರ್ಮ ಪ್ರಧಾನ ಭಾಷಣಕಾರರಾಗಿರುವರು. ವಿಶ್ವಕರ್ಮ ಯುವ ಮಿಲನ್ (ರಿ.) ಪುತ್ತೂರು ವಲಯ ಅಧ್ಯಕ್ಷ ಕೆ. ಹರೀಶ್ ಆಚಾರ್ಯ ಕೃಷ್ಣನಗರ ಗೌರವ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.













