ನಾಳೆ(ಆ.09)ಬೆಳಿಯೂರುಕಟ್ಟೆಯಲ್ಲಿ ಮೊಗೇರ ಗೇಟ್ ವೇ ಯಿಂದ ‘ಆಟಿಡ ಗೌಜಿ ಗಮ್ಮತ್’

0

​ಪುತ್ತೂರು: ಮೊಗೇರ ಗೇಟ್ ವೇ ಬೆಳೆಯೂರುಕಟ್ಟೆ, ಬಲ್ನಾಡು ಗ್ರಾಮ, ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ‘ಆಟಿಡ ಗೌಜಿ ಗಮ್ಮತ್’, ಆರೋಗ್ಯ ಕಾರ್ಡ್ ವಿತರಣೆ, ಮಾದಕ ದ್ರವ್ಯ ದುಷ್ಟರಿಣಾಮ ತಡೆಯುವ ಮಾಹಿತಿ ಕಾರ್ಯಾಗಾರ ಮತ್ತು ಸನ್ಮಾನ ಕಾರ್ಯಕ್ರಮವು ಆ. 9ರಂದು ಬೆಳಿಗ್ಗೆ 10:00 ಗಂಟೆಗೆ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ.

​ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗುಣಪಾಲ್ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ‘ಸುದ್ದಿ ಬಿಡುಗಡೆ’ ಪತ್ರಿಕೆಯ ಪತ್ರಕರ್ತ ಸಿ. ಶೇ. ಕಜೆಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.


​ಗೌರವ ಉಪಸ್ಥಿತರಾಗಿ ಬಲ್ನಾಡು ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ಸತೀಶ್ ಒಳಗುಡ್ಡೆ, ಹಿರೇಬಂಡಾಡಿ ಶಾಲೆಯ ಮುಖ್ಯಗುರು ಬಾಬು ಮಾಸ್ಟರ್, ಇರ್ದೇ ಗೋಳಿಪದವು ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ಸುಂದರ ಗೋಳಿಪದವು, ಪುರುಷರಕಟ್ಟೆ ಅಂಚೆ ಪಾಲಕಿ ರೂಪ ಸರೋಳಿಕಾನ ಹಾಗೂ ಕುರುಡಕಟ್ಟೆ ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ ಉಪಸ್ಥಿತರಿರಲಿದ್ದಾರೆ.
​ಕಾರ್ಯಕ್ರಮದಲ್ಲಿ “ಮೊಗೇರ ದುಡಿಕುಣಿತ” ಹಾಗೂ ಮನೆಯಲ್ಲಿ ತಯಾರಿಸಿದ ಆಟಿ ತಿಂಡಿಗಳ ಪರಿಚಯ ಮತ್ತು ಸಹಭೋಜನ ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here