ಶಿವಳ್ಳಿ ಸಂಪದ ಕಾವು ವಲಯದಿಂದ ಆಟಿಕೂಟ ಸಮಾರಂಭ

0

ಪುತ್ತೂರು: ಶಿವಳ್ಳಿ ಸಂಪದ ಕಾವು ವಲಯದ ವತಿಯಿಂದ ಆಟಿಕೂಟ ಸಮಾರಂಭ ವಿಜಯಕುಮಾರ್ ಪೆರ್ನಾಜೆರವರ ಮನೆಯಲ್ಲಿ ಆ.9ರಂದು ನಡೆಯಿತು.


ಪುತ್ತೂರು ಶಿವಳ್ಳಿ ಸಂಪದ ಅಧ್ಯಕ್ಷ ಸತೀಶ್ ಕೆ.ಎಸ್., ಮಾತನಾಡಿ ಯುವಕರನ್ನು ಸೆಳೆಯುವಲ್ಲಿ ಕಾವು ಶಿವಳ್ಳಿ ಸಂಪದ ಯಶಸ್ವಿಯಾಗಿದ್ದು ನೂರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ ಶಿವಳ್ಳಿ ಬಂಧುಗಳಿಗೆ ಅಭಿನಂದನೆ ಸಲ್ಲಿಸಿದರು. ಕಾವು ವಲಯದ ಗೌರವಾಧ್ಯಕ್ಷ ಗೋಪಾಲಕೃಷ್ಣ ಕುಂಜತ್ತಾಯ ಸಂದರ್ಭೋಚಿತವಾಗಿ ಮಾತನಾಡಿದರು.


ದರ್ಬೆ ವಲಯದ ಅಧ್ಯಕ್ಷ ಪ್ರೀತಂ ಪುತ್ತೂರಾಯ, ನರಿಮೊಗರು ವಲಯದ ಅಧ್ಯಕ್ಷ ಪ್ರಕಾಶ್ ಪುತ್ತೂರಾಯ ಹಾಗೂ ಉದಯಕುಮಾರ್ ಪಜಿಮಣ್ಣು, ಶ್ರೀನಿವಾಸ ಕುಂಜತ್ತಾಯ, ಪುತ್ತೂರು ಶಿವಳ್ಳಿ ಸಂಪದ ಸಂಘಟನಾ ಕಾರ್ಯದರ್ಶಿ ರವೀಂದ್ರ ಟಿ. ಮಾತನಾಡಿ ಆಟಿಯ ಮಹತ್ವ ತಿಳಿಸಿದರು. ಕಾವು ವಲಯದ ಅಧ್ಯಕ್ಷ ಹರೀಶ್ ಕುಂಜತಾಯರು ಮಾತನಾಡಿ ತಾಲೂಕು ಮಹಾಸಭೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಗೋಪಾಲಕೃಷ್ಣ ಕುಂಜತಾಯ ಮತ್ತು ಪ್ರಕಾಶ್ ಉಂಗ್ರುಪುಳಿತ್ತಾಯರವರನ್ನು ಅಭಿನಂದಿಸಿದರು. ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಮುಚ್ಚಿನ್ತಾಯ, ಕೋಶಾಧಿಕಾರಿ ಕೃಷ್ಣರಾಜ ಎರ್ಕಡಿತ್ತಾಯ, ತಾಲೂಕು ಉಪಾಧ್ಯಕ್ಷ ಪ್ರತಿಭಾ ಓಕುನ್ನಾಯ, ನಿರ್ದೇಶಕರಾದ ರಂಗನಾಥ ರಾವ್ ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ಸತ್ಯಭಾಮ ಕೆದಿಲಾಯರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಾಮಕೃಷ್ಣ ಉಂಗ್ರುಪುಳಿತಾಯ ದಂಪತಿಯನ್ನು ಸನ್ಮಾನಿಸಲಾಯಿತು. ಪವಿತ್ರ ಮುಂಡ್ಯ ಸನ್ಮಾನ ಪತ್ರ ವಾಚಿಸಿದರು. ವಿಶ್ವೇಶ್ ಕುಂಜತ್ತಾಯ ಹಾಸ್ಯ ಚುಟುಕು ಹೇಳಿದರು. ವಲಯದ ಕಾರ್ಯದರ್ಶಿ ರಶ್ಮಿ ಮೂಡೆ ತ್ತಾಯ ವರದಿ ವಾಚಿಸಿದರು, ಆಯುಷ್ ಪೆರ್ನಾಜೆ ಪ್ರಾರ್ಥಿಸಿದರು. ರಮ್ಯಾ ಕುಂಜತ್ತಾಯ ಕಾರ್ಯಕ್ರಮ ನಿರೂಪಿಸಿ ಶೀಲತಾ ಉಂಗುರುಪುಳಿತ್ತಾಯ ವಂದಿಸಿದರು. ಕಾವು ವಲಯದ ಮಹಿಳೆಯರು ವಿವಿಧ ಆಟಿಯ ತಿಂಡಿ ತಿನಿಸುಗಳನ್ನು ಉಣಬಡಿಸಿದರು.ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here