ಅತೀ ಹೆಚ್ಚು ಅಡಿಕೆ ಖರೀದಿ : ಮಾನಂಜೆ ಮಾಸ್ ಶಾಖೆಯ ವ್ಯವಸ್ಥಾಪಕ ಉಮೇಶ್ ಬಲ್ಲಾಳ್‌ಗೆ ಸನ್ಮಾನ

0

ಪುತ್ತೂರು: ಅತೀ ಹೆಚ್ಚು ಅಡಿಕೆ ಖರೀದಿ ಮಾಡಿದ ಸಾಧನೆಗೆ ಕಮಲಶಿಲೆ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿರುವ ಮಾಸ್ ಅಡಿಕೆ ಖರೀದಿ ಕೇಂದ್ರಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು.


ಮಂಗಳೂರು ಬೈಕಂಪಾಡಿಯಲ್ಲಿ ಮಾಸ್ ಸಂಸ್ಥೆಯ ಅಧ್ಯಕ್ಷ ಸವಣೂರು ಸೀತಾರಾಮ ರೈರವರ ಅಧ್ಯಕ್ಷತೆಯಲ್ಲಿ ನಡೆದ ಮಾಸ್ ವಾರ್ಷಿಕ ಮಹಾಸಭೆಯಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಯಡಿಯಾಳ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚೆನ್ನ ಪೂಜಾರಿ ಹಾಗೂ ಮಾಸ್ ಸಂಸ್ಥೆಯ ಮಾನಂಜೆ ಶಾಖೆಯಲ್ಲಿ ವ್ಯವಸ್ಥಾಪಕರಾಗಿದ್ದ ಉಮೇಶ್ ಬಲ್ಲಾಳ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಮೇಶ್ ಬಲ್ಲಾಳ್ ಅವರು ಬೆಟ್ಟಂಪಾಡಿ ಗ್ರಾಮದ ಬೆಟ್ಟಂಪಾಡಿ ಬೀಡು ನಿವಾಸಿಯಾಗಿದ್ದಾರೆ.

ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸುದೀಪ್ ಶೆಟ್ಟಿ, ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್, ಬಾಲಚಂದ್ರ ಭಟ್ ಮತ್ತು ನಿರ್ದೇಶಕರಾದ ಮಾಧವ ಶೆಣೈ, ಮಂಜುನಾಧ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here