ಕರಾಟೆ: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಪಿಎಚ್ ಸ್ವಾಲಿಹಾ, ಸಾನಿಧ್ಯ ಎ. ಜಿಲ್ಲಾಮಟ್ಟಕ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಪಿಎಚ್ ಸ್ವಾಲಿಹಾ 10ನೇ ತರಗತಿ (ಎಸ್. ಅಬ್ದುಲ್ ಹಮೀದ್ ಮತ್ತು ಸುಮಯ್ಯತ್ ದಂಪತಿ ಪುತ್ರಿ) ಹಾಗೂ ಸಾನಿಧ್ಯ ಎ. 8ನೇ ತರಗತಿ (ಅನಂತ ಕೃಷ್ಣ ಮತ್ತು ಮೋಹಿನಿ ಎಂ. ದಂಪತಿ ಪುತ್ರಿ) ಇವರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here