ರೋಟರಿ ಕ್ಲಬ್ ಪುತ್ತೂರಿನಿಂದ ಆಟಿದ ನೆಂಪು 

0

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಹಿರಿಯ ಕ್ಲಬ್ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಬೊಳ್ವಾರಿನ ಮಹಾವೀರ ವೆಂಚರ್ಸ್ ನಲ್ಲಿ ಆಟಿದ ನೆಂಪು ಕಾರ್ಯಕ್ರಮ ಆ.7 ರಂದು  ಸಂಭ್ರಮದಿಂದ ಆಚರಿಸಲಾಯಿತು. 

ಮುಖ್ಯ ಅತಿಥಿ, ಕಲಾವಿದರಾದ ಮಟ್ಟಿ ರಾಮಚಂದ್ರ ರಾವ್ ವರು ಆಟಿ ಆಚರಣೆ, ಆಟಿಯ ವೈಜ್ಞಾನಿಕ ತಿನಸುಗಳು, ಆಟಿ ಕಳೆಂಜ, ಆಟಿ ಕಷಾಯ, ಆಟಿ ಸಂಪ್ರದಾಯ ಪದ್ಧತಿ ಮತ್ತು ಮಹತ್ವದ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಕ್ಲಬ್ ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಮಾತನಾಡಿ, ಹಿಂದಿನ ಹಿರಿಯರು ಆಚರಿಸಿಕೊಂಡು ಬಂದಿರುವ ಆಟಿ ಸಂಪ್ರದಾಯವನ್ನು ಇಂದಿನ ಪೀಳಿಗೆ ಉಳಿಸಿ, ಮುಂದಿನ ಪೀಳಿಗೆಗೆ ಮುಟ್ಟುವಂತಾಗಬೇಕು ಎಂದು ಹೇಳಿ ಆಟಿ ಖಾದ್ಯಗಳನ್ನು ತಯಾರಿಸಿ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಸದಸ್ಯರ ಸೇರ್ಪಡೆ:
ನೂತನ ಸದಸ್ಯರಾದ ನಿವೃತ್ತ ಡಿಡಿಪಿಐ ವಾಲ್ಟರ್ ಡಿ’ಮೆಲ್ಲೋ, ಉದ್ಯಮಿ ಶಿವಪ್ರಸಾದ್ ಶೆಟ್ಟಿ, ಶೋಭಾರವರುಗಳನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜರವರು ರೋಟರಿ ಪಿನ್ ತೊಡಿಸಿ ಸೇರ್ಪಡೆಗೊಳಿಸಿ ಆಟಿ ವೈಶಿಷ್ಟ್ಯತೆ ಹಾಗೂ ರೋಟರಿ ಕ್ಲಬ್ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಮಾತನಾಡಿದರು. ನೂತನ ಸದಸ್ಯರ ಸೇರ್ಪಡೆ ಪರಿಚಯವನ್ನು ಪೂರ್ವಾಧ್ಯಕ್ಷ ಉಮಾನಾಥ್ ಪಿ.ಬಿರವರು ನೀಡಿದರು.

ಸನ್ಮಾನ:
ಈ ಸಂದರ್ಭದಲ್ಲಿ ಸ್ವಾಧಿ ರೈ, ಆರಾಧನಾ, ತೇಜಸ್, ವೈಭವ್, ಡಾ.ಅನಿರುದ್ಧ್ ಪೈ, ಪವಿತ್ರಾ ರೂಪೇಶ್, ಕೇಶವ ಅಮೈ, ಚಿದಾನಂದ ಬೈಲಾಡಿರವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ನಿಕಟಪೂರ್ವ ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ ನೀಡಿದರು. 

ಕ್ಲಬ್ ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ನಿಯೋಜಿತ ಅಧ್ಯಕ್ಷ ಸುದರ್ಶನ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ರಾಮಕೃಷ್ಣ ರಾವ್ ಪ್ರಾರ್ಥಿಸಿದರು. ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಲೋವಲ್ ಮೇವಾಡ ವರದಿ ವಾಚಿಸಿದರು. ಸದಸ್ಯ ಬಿ.ವಿ ಕಿಶನ್ ಅತಿಥಿಗಳನ್ನು ಪರಿಚಯಿಸಿದರು. 

ಹುಟ್ಟುಹಬ್ಬ ಆಚರಿಸಿದ ರೋಟರಿ ಸದಸ್ಯರನ್ನು  ಗೌರವಿಸಲಾಯಿತು.ಕ್ಲಬ್ ಸರ್ವಿಸ್ ನಿರ್ದೇಶಕ ಸತೀಶ್ ತುಂಬ್ಯ ವಂದಿಸಿದರು. ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕ್ಲಬ್ ಪೂರ್ವಾಧ್ಯಕ್ಷ ಜೈರಾಜ್ ಭಂಡಾರಿರವರ ನಿರ್ದೇಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬಂತು. ಲಲಿತಾರವರು ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಗೈದರು.

LEAVE A REPLY

Please enter your comment!
Please enter your name here