






ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ ಇದರ ೨೪ನೇ ವರ್ಷದ ಕಾರ್ಯಕ್ರಮದ ಪದಾಧಿಕಾರಿಗಳ ಆಯ್ಕೆಯು ಪೂರ್ಲಪ್ಪಾಡಿ ಶ್ರೀವರ ವೇದಿಕೆ ವಠಾರದಲ್ಲಿ ನಡೆಯಿತು.


ಸಮಿತಿಯ ನೂತನ ಅಧ್ಯಕ್ಷರಾಗಿ ನಾಗೇಶ್ ಪೂಜಾರಿ ಪೂರ್ಲಪ್ಪಾಡಿ, ಗೌರವಾಧ್ಯಕ್ಷರಾಗಿ ಈಶ್ವರ ಭಟ್ ಪಿ, ಗೌರವ ಸಲಹೆಗಾರರಾಗಿ ರಾಮಣ್ಣ ಗೌಡ ದೇವರಮನೆ, ಉಪಾಧ್ಯಕ್ಷರಾಗಿ ರಾಜೇಶ್ ಎಂ ಎನ್ ಹಾಗೂ ಯೋಗಿತಾ ದೇವಿಪ್ರಸಾದ್, ಪ್ರಧಾನ ಕಾರ್ಯದರ್ಶಿ ಜಯಂತ ಪಿ, ಕಾರ್ಯದರ್ಶಿ ರುಕುಮ ಗೌಡ, ಜತೆ ಕಾರ್ಯದರ್ಶಿ ಕಿರಣ್‌ಚಂದ್ರ ಆಳ್ವ, ವಿಜಯ ಪಿ, ಕೋಶಾಧಿಕಾರಿ ಯತೀಶ ಪಿ, ಜತೆ ಕೋಶಾಧಿಕಾರಿ ಭರತ್ ಕುಮಾರ್, ಪ್ರಜೇಶ್ ಕೆ ಕ್ರೀಡಾ ಕಾರ್ಯದರ್ಶಿ ಧನುಷ್ ಕೆ ಹಾಗೂ ಜಯಲಕ್ಷಿ ಕೆ, ಜತೆ ಕ್ರೀಡಾ ಕಾರ್ಯದರ್ಶಿ ಮನೋಜ್ ಪಿ ಡಿ, ಗೀತಾ ನಡುಮನೆ, ಇಂದಿರಾ ನೀರ್ಜರಿ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಪಿ. ಹಾಗೂ ವಿಶಾಕ್ ಕೆ. ಸೇರಿದಂತೆ ಸಮಿತಿಗೆ ಒಂಭತ್ತು ಜನ ಸಲಹಾ ಸದಸ್ಯರನ್ನು ಆಯ್ಕೆಗೊಳಿಸಲಾಯಿತು.













