







ಪುತ್ತೂರು:ಮಂತ್ರಾಲಯಕ್ಕೆ ತೆರಳಿದ್ದ ಪುತ್ತೂರು ಮೂಲದ ಉದ್ಯಮಿಯೋರ್ವರು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತರಾದ ಘಟನೆ ವರದಿಯಾಗಿದೆ.


ಬೆಳಿಯೂರುಕಟ್ಟೆ ಮೂಲದವರಾಗಿದ್ದು ಸದ್ಯ ಮಂಗಳೂರುನಲ್ಲಿ ವಾಸ್ತವ್ಯವಿದ್ದ ಸಂದೀಪ್ ಶೆಟ್ಟಿ(44ವ.)ಮೃತಪಟ್ಟವರು.ಆ.9ರಂದು ಮಂಗಳೂರುನಿಂದ ಬಸ್ಸಿನಲ್ಲಿ ಮಂತ್ರಾಲಕ್ಕೆ ಹೋಗಿದ್ದ ಅವರು ಹಿಂತಿರುಗಿ ಬರುವಾಗ ಘಟನೆ ಸಂಭವಿಸಿದೆ.ಆ.10ರಂದು ರಾತ್ರಿ ಹಿಂತಿರುಗಿ ಬಂದ ಬಸ್ಸು ಬಳ್ಳಾರಿಯ ಎಪಿಎಂಸಿ ಬಸ್ ನಿಲ್ದಾಣದಲ್ಲಿ ತಂಗಿತ್ತು.ರಾತ್ರಿ 2.30ರ ಸುಮಾರಿಗೆ ಸಂದೀಪ್ ಶೆಟ್ಟಿಯವರು ಬಸ್ಸಿನಿಂದಿಳಿದು ನಿಲ್ದಾಣದಲ್ಲಿ ಕುಳಿತುಕೊಂಡಿ ಮುಂಜಾನೆ 4 ಗಂಟೆ ವೇಳೆಗೆ ಅವರು ಹೃದಯಾಘಾತಕ್ಕೊಳಗಾಗಿದ್ದರು.ಬಳಿಕ ವಿಷಯ ತಿಳಿದ ಇತರ ಪ್ರಯಾಣಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.ಪೊಲೀಸರು ಆಗಮಿಸಿ, ಬಸ್ ನಿಲ್ದಾಣದಲ್ಲಿನ ಸಿಸಿ ಟಿವಿ ಮೂಲಕ ಘಟನೆ ಖಚಿತ ಪಡಿಸಿಕೊಂಡಿದ್ದರು.ಸಂದೀಪ್ ಶೆಟ್ಟಿಯವರು ಬಸ್ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತರಾಗಿದ್ದ ಕುರಿತು ಪೊಲೀಸರು ಮೃತರ ಮಗನ ಮೊಬೈಲ್ಗೆ ಸಂದೇಶ ಕಳುಹಿಸಿದ್ದರು.ಪಿಯುಸಿ ವಿದ್ಯಾರ್ಥಿಯಾಗಿದ್ದ ಮಗ ದೃಪದ್ ಅವರು ಕಾಲೇಜು ಅವಽಯಲ್ಲಿ ಮೊಬೈಲ್ ಸೈಲೆಂಟ್ ಮೋಡ್ನಲ್ಲಿಟ್ಟಿದ್ದರಿಂದ ಅವರು ಈ ಸಂದೇಶ ನೋಡುವಾಗ ತಡವಾಗಿತ್ತು.ಮಧ್ಯಾಹ್ನದ ಬಳಿಕ ಅವರು ಸಂದೇಶ ನೋಡಿದ ಕೂಡಲೇ ತನ್ನ ತಾಯಿಯ ಸೋದರ ಮಾವ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರಿಗೆ ವಿಷಯ ತಿಳಿಸಿದರು.ಬಳಿಕ ಜಗದೀಶ್ ಶೆಟ್ಟಿ ಮತ್ತು ಮೃತರ ಪತ್ನಿ,ಮಗ ಆ.11ರಂದು ಸಂಜೆ ಬಳ್ಳಾರಿಗೆ ಹೋಗಿದ್ದು ಮೃತದೇಹವನ್ನು ಇನ್ನಷ್ಟೆ ಊರಿಗೆ ತರಬೇಕಿದೆ ಎಂದು ತಿಳಿದು ಬಂದಿದೆ.



ಆ.26ಕ್ಕೆ ಮತ್ತೆ ವಿದೇಶಕ್ಕೆ ಹೋಗುವವರಿದ್ದರು:
ಬೆಳಿಯೂರುಕಟ್ಟೆ ನಾರಾಯಣ ಶೆಟ್ಟಿ-ಕುಮುದಾ ದಂಪತಿಯ ಮಗ ಸಂದೀಪ್ ಶೆಟ್ಟಿಯವರು ಈ ಹಿಂದೆ ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ಸಹಿತ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.ಮಂಗಳೂರು ಹೋದ ಬಳಿಕ ಆರಂಭದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ಬಳಿಕ ಸ್ವಂತ ವ್ಯಾಪಾರ ಆರಂಭಿಸಿದ್ದರು.ವರ್ಷಗಳ ಹಿಂದೆ ವಿದೇಶಕ್ಕೆ ತೆರಳಿದ್ದ ಅವರು ಇತ್ತೀಚೆಗೆ ಊರಿಗೆ ಬಂದಿದ್ದರು ಮಾತ್ರವಲ್ಲದೆ ಆ.26ರಂದು ಮತ್ತೆ ವಿದೇಶಕ್ಕೆ ಹೋಗುವವರಿದ್ದರು.ಆದರೆ ವಿಽಯಾಟವೇ ಬೇರೆಯಾಗಿತ್ತು.ಮೃತರು ಪತ್ನಿ ವಿದ್ಯಾ ಶೆಟ್ಟಿ, ಮಗ ದೃಪದ್, ತಾಯಿ ಕುಮುದಾ,ಸಹೋದರ ದಿಲೀಪ್ ಅವರನ್ನು ಅಗಲಿದ್ದಾರೆ.










