






ಪುತ್ತೂರು: ಮಹಾತ್ಮಗಾಂಧಿ ಕೆದಂಬಾಡಿ ಗ್ರಾಮ ಪಂಚಾಯತ್ತಿನ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಆ. 13 ರಂದು ಪೂರ್ವಾಹ್ನ 10.30 ಗಂಟೆಗೆ ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.


ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993(3)ರ ಪ್ರಕರಣದಂತೆ ಈ ಸಭೆಯನ್ನು ಕರೆಯಲಾಗಿದ್ದು, ಪುತ್ತೂರಿನ ಅಕ್ಷರದಾಸೋಹ ವಿಭಾಗದ ಸಹಾಯಕ ನಿರ್ದೇಶಕರು ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ.



ಸಭೆಯಲ್ಲಿ ಗ್ರಾಮದ ಸರ್ವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮದ ಅಭಿವೃದ್ಧಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸಬೇಕಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ., ಕಾರ್ಯದರ್ಶಿ ದೇವಪ್ಪ ನಾಯ್ಕ ಕೆ., ಆಡಳಿತಾಧಿಕಾರಿ ವಿದ್ಯಾರಾಣಿ ಪಿ.ಕೆ. ಹಾಗೂ ಸಿಬ್ಬಂದಿ ವರ್ಗದವರು ವಿನಂತಿಸಿದ್ದಾರೆ.
ವಿಶೇಷ ಸೂಚನೆ: 2026-27ನೇ ಸಾಲಿನ ಕಟ್ಟಡ ತೆರಿಗೆ, ಕಟ್ಟಡ ಬಾಡಿಗೆ, ನೀರಿನ ತಗಾದೆ, ವ್ಯಾಪಾರ ಲೈಸೆನ್ಸ್ ಹಾಗೂ ಸ್ವಚ್ಛತಾ ಶುಲ್ಕವನ್ನು ಪಾವತಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುವಂತೆ ಕೋರಲಾಗಿದೆ.










