







ಬೆಂಗಳೂರು:ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿ(ಸಿಇಆರ್ಡಿ)ಯ 118ನೇ ಅಧಿವೇಶನವು ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿರುವ ಪಲೈಸ್ ಡೆಸ್ ನೇಷನ್ಸ್ನಲ್ಲಿ ಆ.10ರಂದು ಆರಂಭಗೊಂಡಿದ್ದು, ಆ.25ರವರೆಗೆ ನಡೆಯಲಿದೆ.


ಆ.11 ಮತ್ತು 12ರಂದು ಭಾರತದ ವರದಿಯ ಪರಿಶೀಲನೆ ನಡೆದಿದ್ದು,ಈ ಮಹತ್ವದ ಅಂತರ್ರಾಷ್ಟ್ರೀಯ ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಹಾಗೂ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಈಶ್ವರಮಂಗಲದ ಕೆ.ಎಂ.ನಟರಾಜ್ ಅವರು ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.ಈ ಮೊದಲು ಕೆ.ಎಂ.ನಟರಾಜ್ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿಯೂ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.



ಕರ್ನಾಟಕದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿ ಪ್ರಸ್ತುತ ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಕೆ.ಎಂ.ನಟರಾಜ್ ಅವರು ಭಾರತ ಸರ್ಕಾರದ ನಿಯೋಗಗಳಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ, ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ನಿಲುವು,ನಿರ್ಧಾರಗಳು ಹಾಗೂ ಸಲಹೆಗಳನ್ನು ಸಮರ್ಥವಾಗಿ ಜಗತ್ತಿನ ಮುಂದೆ ಮಂಡಿಸುತ್ತಿದ್ದಾರೆ.ಹಲವಾರು ಬಾರಿ ದೇಶವನ್ನು ಪ್ರತಿನಿಧಿಸಿ, ವಿವಿಧ ನಾಯಕತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಹಾಗೂ ಭಾರತ ಸರ್ಕಾರದ ಹಿರಿಯ ನ್ಯಾಯವಾದಿಯಾಗಿ ಸಮಾಜ ಮತ್ತು ದೇಶದ ಹಿತಾಸಕ್ತಿಯ ವಿಚಾರಗಳನ್ನು ಸಮರ್ಥವಾಗಿ ಮಂಡಿಸುತ್ತಿರುವ ಕೆ.ಎಂ.ನಟರಾಜ್ ಅವರ ಕಾರ್ಯದಕ್ಷತೆ, ವಿಷಯ ಮಂಡಿಸುವ ಶೈಲಿ, ನಾಯಕತ್ವದ ಗುಣ ಹಾಗೂ ದೇಶದ ಪರವಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಮರ್ಥವಾಗಿ ವಾದ ಮಂಡಿಸುವ ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವಾಗಿದೆ.










