ಆಗಸ್ಟ್ 13ರಿಂದ 15- ಎಲ್ಲಾ ನಾಗರಿಕರು ರಾಷ್ಟ್ರಧ್ವಜ ಹಾರಿಸಲು ಸುಳ್ಯ ಭಾಜಪಾ ಕರೆ

0

ಕಡಬ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ 80ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರ ತನಕ ಎಲ್ಲಾ ನಾಗರಿಕರು ನಮ್ಮ ನಮ್ಮ ಮನೆಗಳಲ್ಲಿ, ವಾಣಿಜ್ಯ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಹಂಚಿಕೊಳ್ಳುವಂತೆ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ವಿನಂತಿಸಿಕೊಂಡಿದ್ದಾರೆ.


ಈ ದೇಶದ ಸ್ವಾತಂತ್ರ್ಯಕ್ಕೋಸ್ಕರ ಸಾವಿರಾರು ಜನ ಬಲಿದಾನ ಮಾಡಿದ್ದಾರೆ. ಗಳಿಸಿಕೊಂಡ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ, ದೇಶದ ಅಖಂಡತೆಯನ್ನು ಕಾಪಾಡುವುದಕ್ಕಾಗಿ ನೂರಾರು ವೀರ ಸೈನಿಕರು ಪ್ರಾಣಾರ್ಪಣೆ ಮಾಡಿದ್ದಾರೆ. ಅವರೆಲ್ಲರನ್ನು ನೆನಪಿಸಿಕೊಂಡು ದೇಶದ ಸಮಗ್ರತೆ ಹಾಗೂ ಅಖಂಡತೆಗಾಗಿ ಸಂಕಲ್ಪ ತೊಡುವುದು ನಾಗರಿಕರೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಗೌರವದ ಸಂಕೇತವಾದ ರಾಷ್ಟ್ರಧ್ವಜವನ್ನು ಮನೆ ಮನೆಗಳಲ್ಲಿ ಹಾರಿಸುವ ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here