ಸುವರ್ಣ ಮಹೋತ್ಸವದ ಅಂಗವಾಗಿ ಸಮಗ್ರ ಕೃಷಿ ಮಾಹಿತಿ ಕಾರ್ಯಾಗಾರ

0

ಅರಿಯಡ್ಕ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಕುಂಬ್ರ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಅರಿಯಡ್ಕ ಗ್ರಾಮ ಸಮಿತಿಯ ಸಹಯೋಗದೊಂದಿಗೆ ರೈತ ಸದಸ್ಯರಿಗಾಗಿ ಸಮಗ್ರ ಕೃಷಿ ಕುರಿತು ಮಾಹಿತಿ ಕಾರ್ಯಾಗಾರ ಆ.13ರಂದು ಶ್ರೀ ಕೃಷ್ಣ ಭಜನಾ ಮಂದಿರ, ಕೌಡಿಚ್ಚಾರು–ಅರಿಯಡ್ಕ ಇದರ ಸಭಾಭವನದಲ್ಲಿ ನಡೆಯಿತು.

ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿ, ರೈತರಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ರಿ., ಕೌಡಿಚ್ಚಾರು–ಅರಿಯಡ್ಕ ಇದರ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕುಂಬ್ರ ಇದರ ನಿರ್ದೇಶಕ ಉಮೇಶ್ ಗೌಡ ಕನ್ನಯ ಉಪಸ್ಥಿತರಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಕುಂಬ್ರ ಇದರ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘ ಕಳೆದ ಐವತ್ತು ವರ್ಷಗಳಿಂದ ರೈತರೊಂದಿಗೆ ಇದ್ದು, ರೈತರೆಲ್ಲರೂ ಸಹಕಾರಿ ಸಂಘ ದೊಂದಿಗೆ ಕೈಜೋಡಿಸಿದ ಕಾರಣ ಇಂದು ಸಂಘ ಅತೀ ಎತ್ತರಕ್ಕೆ ಬೆಳೆದು ನಿಂತಿದೆ.ಈ ವರ್ಷ ಸಂಘಕ್ಕೆ ಸುವರ್ಣ ಸಂಭ್ರಮ.ಈ ನಿಟ್ಟಿನಲ್ಲಿ ರೈತರಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶುಭ ಹಾರೈಸಿದರು.


ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆದವು. ಸಮಗ್ರ ಕೃಷಿ ಕುರಿತು ಕೆ.ವಿ.ಕೆ. ಮಂಗಳೂರು ಇದರ ಹಿರಿಯ ವಿಜ್ಞಾನಿ ಡಾ. ರಶ್ಮಿ ಹಾಗೂ ಜೇನು ಕೃಷಿ ಕುರಿತು ರಾಜ್ಯ ಮಟ್ಟದ ಜೇನು ಕೃಷಿ ತರಬೇತುದಾರ ರಾಧಾಕೃಷ್ಣ ಆರ್. ಕೋಡಿ ಅವರು ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅರಿಯಡ್ಕ ಗ್ರಾಮ ಸಮಿತಿ ಅಧ್ಯಕ್ಷ ಕುಂಞಿ ರಾಮ ಮಣಿಯಾಣಿ ಕುತ್ಯಾಡಿ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಕುಂಬ್ರ ಇದರ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ರವರು ಮಾತನಾಡಿ, ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಇರುವ ನಮ್ಮ ಸಹಕಾರಿ ಸಂಘ ರೈತರಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.ಈ ಕಾರ್ಯಾಗಾರ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ವೇದಿಕೆಯಲ್ಲಿ,ನಿರ್ದೇಶಕರಾದ ವಸಂತ ಕುಮಾರ್ ಎಂ. ಕೌಡಿಚ್ಚಾರು ಹಾಗೂ ಸತೀಶ್ ಕರ್ಕೆರ ಮಡ್ಯಂಗಳ, ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್. ಉಪಸ್ಥಿತರಿದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಕುಂಬ್ರ ಇದರ ಶಾಖಾ ವ್ಯವಸ್ಥಾಪಕ ರಾಜ್ ಪ್ರಕಾಶ್ ರೈ ಕುಂಬ್ರ, ಸಮಿತಿ ಕೋಶಾಧಿಕಾರಿ ಕೊರಗಪ್ಪ ನಾಯ್ಕ ಬಳ್ಳಿಕಾನ, ನಾರಾಯಣ ನಾಯ್ಕ ಚಾಕೋಟೆ, ರಮೇಶ್ ನಿಧಿಮುಂಡ, ಸುಮತಿ ಕೌಡಿಚ್ಚಾರು, ಯುವರಾಜ್ ಪೂಂಜಾ ಗೋಳ್ತಿಲ, ಕೊರಗಪ್ಪ ಗೌಡ ಮಡ್ಯಂಗಳ, ಬಾಲಸುಬ್ರಹ್ಮಣ್ಯ ಮುಂಡ ಕೊಚ್ಚಿ ಹಾಗೂ ಉಮೇಶ್ ಶೇಖಮಲೆ ಅವರು ಅತಿಥಿಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ನೂರಾರು ರೈತರು ಭಾಗವಹಿಸಿದ್ದರು. ಶ್ರೀ ಕೃಷ್ಣ ಭಜನಾ ಮಂದಿರ, ಕೌಡಿಚ್ಚಾರು ಇದರ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ಶೇಖಮಲೆ ಪ್ರಾರ್ಥಿಸಿ,ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ಬಪ್ಪ ಪಾಟಾಳಿ ವಂದಿಸಿದರು. ಶ್ರೀ ಕೃಷ್ಣ ಭಜನಾ ಮಂದಿರ, ಕೌಡಿಚ್ಚಾರು ಇದರ ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here