









ಕಾಣಿಯೂರು: ಚಾರ್ವಾಕ ಸ. ಉ. ಹಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ಶಾಲಾ ಆವರಣದ ಸುತ್ತಮುತ್ತ ಬೆಳೆದು ನಿಂತಿದ್ದ ಕುರುಚಲು ಸಸ್ಯಗಳು, ಮುಳ್ಳಿನ ಗಿಡಗಂಟಿಗಳನ್ನು ಶಾಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಪೋಷಕರ ಸಹಬಾಗಿತ್ವದಲ್ಲಿ ಆ 13ರಂದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.



ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್ ಎಣ್ಮೂರು, ಉಪಾಧ್ಯಕ್ಷರಾದ ಸಾರಿಕಾ ದೇವರತ್ತಿಮಾರು, ಸದಸ್ಯರಾದ ವಿಶ್ವನಾಥ ಕಂಚನ, ಚಂದಪ್ಪ ಗೌಡ ಕುಕ್ಕುನಡ್ಕ, ಸತ್ಯಪ್ರಸಾದ್ ಕೋಡಂದೂರು, ಮೀರಾ ಕಳೆಂಜೋಡಿ, ಶೀಲಾವತಿ ಬೀರೊಳಿಕೆ, ಮೀನಾಕ್ಷಿ ಕೋಡಂದೂರು, ರಮ್ಯಾ ಬೀರೊಳಿಕೆ, ರುಕ್ಮಿಣಿ ನಾಗಲೋಕ,ಜಯಶೀಲಾ ಬಾಂತೋಡು, ಚಿತ್ರ ನಡುಬೈಲು,ಕೇಸರಿ ಆತಾಜೆ, ಸುಶೀಲಾ ನಾಗಲೋಕ ಹಾಗೂ ಪೋಷಕರಾದ ಬಾಲಸುಬ್ರಹ್ಮಣ್ಯ ಎರ್ಬೊಳು, ಡೀಕಮ್ಮ ನಡುಬೈಲು, ಲಿಂಗಮ್ಮ ಬಾಂತೋಡುರವರು ಭಾಗವಹಿಸಿದ್ದರು.










