






ಪುತ್ತೂರು: ಪುತ್ತೂರು ಬಸ್ನಿಲ್ದಾಣದ ಬಳಿ ಹಲವು ವರ್ಷಗಳ ಹಿಂದೆ ಪುಂಡಿಗಸಿ ವ್ಯಾಪಾರಿಯಾಗಿದ್ದ ಕೋರ್ಟ್ ರೋಡ್ ನಿವಾಸಿ ‘ಮಾತ’ ಎಂದೇ ಚಿರಪರಿಚಿತರಾಗಿದ್ದ ಮಂಜುನಾಥ್ ಕಾಮತ್ (58ವ) ಆ.13ರಂದು ಸಂಜೆ ನಿಧನರಾದರು.


ಅವಿವಾಹಿತರಾಗಿದ್ದ ಮಂಜುನಾಥ್ ಕಾಮತ್ ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಮನೆಯಲ್ಲೇ ವಿಶ್ರಾಂತಿಯಲ್ಲಿದ್ದರು. ಮೃತರು ಸಹೋದರಿಯನ್ನು ಅಗಲಿದ್ದಾರೆ.













