






ಪುತ್ತೂರು: ಪಾಣಾಜೆ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪುರಂದರ ನಾಯ್ಕ ಎಂ.ಜಿ. (85ವ.) ಆ.14ರಂದು ನಿಧನರಾದರು.


ಪುರಂದರ ನಾಯ್ಕ ಎಂ.ಜಿ. ಅವರು ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಆರಂಭದ ಕಾಲದಿಂದಲೇ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.



ಮೃತರು ಪತ್ನಿ ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸವಿತಾ ಎಂ.ಜಿ., ಪುತ್ರರಾದ ಚಂದ್ರಶೇಖರ ನಾಯ್ಕ್, ಮಧುಸೂದನ್ ಎಂ.ಜಿ. ಹಾಗೂ ಪುತ್ರಿ ಅಕ್ಷತಾ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.










