






ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಇಕೋ ಕ್ಲಬ್, ಆಂಟಿ ಡ್ರಗ್ ಸೆಲ್ ಸಂಘಗಳ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಶೇಷ ಮ್ಯರೋಥಾನ್ ಓಟ ಆ.14ರಂದು ನಡೆಯಿತು.


ಈ ಓಟವು ನಶಾ ಮುಕ್ತ ಭಾರತ, ಸ್ವಚ್ಛ ಮತ್ತು ಸದೃಢ ಭಾರತ, ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ರೂಪಿತಗೊಂಡಿತ್ತು. ಮ್ಯಾರಥಾನ್ ಓಟಕ್ಕೆ ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ಹರೀಶ್ ಬಾರಿಂಜರವರು ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಕೆ. ಮಾರ್ಗದರ್ಶನದಲ್ಲಿ ಈ ಓಟವು ಕಾಲೇಜಿನಿಂದ ಕೊಯಿಲದವರೆಗೆ ಸಾಗಿ ಮರಳಿತು.
ದೈಹಿಕ ಶಿಕ್ಷಣ ನಿರ್ದೇಶಕರಾದ ಗಣೇಶ್ ಕೆ ಕಾರ್ಯಕ್ರಮದ ಸಂಯೋಜನೆ ಮಾಡಿದರು. ಕಾಲೇಜಿನ ವಿವಿಧ ವಿಷಯಗಳ ಉಪನ್ಯಾಸಕರು, ಬೋಧಕೇತರ ವೃಂದದವರು ಸಹಕರಿಸಿದರು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದರು.













