ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿದ್ಯಾಭಾರತಿ ಜಿಲ್ಲಾಮಟ್ಟದ ಗಣಿತ -ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವದಲ್ಲಿ ಶಾಲಾ ಮಕ್ಕಳ ಸಾಧನೆ

0

ಪುತ್ತೂರು : ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿದ್ಯಾಭಾರತಿ ಜಿಲ್ಲಾಮಟ್ಟದ ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವವು ದಿನಾಂಕ 13 -8- 2026ನೇ ಗುರುವಾರದಂದು ಜರುಗಿತು.

ವಿದ್ಯಾಭಾರತಿ ಸಮೂಹದ 30 ಶಾಲೆಗಳು ಇದರಲ್ಲಿ ಪಾಲ್ಗೊಂಡಿದ್ದು, ಸುಮಾರು 800ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಗಣಿತ ಮತ್ತು ವಿಜ್ಞಾನ ಮಾದರಿ ಪ್ರದರ್ಶನ, ಗಣಿತ ಮತ್ತು ವಿಜ್ಞಾನ ಪ್ರಯೋಗ, ಸಂಸ್ಕೃತಿ ಕಥಾ ಕಥನ, ರಸಪ್ರಶ್ನೆ, ಗಣಿತ ಮತ್ತು ವಿಜ್ಞಾನ ಪತ್ರಿಕಾ ಮಂಡನೆ, ಮಣ್ಣಿನ ಕಲಾಕೃತಿ ಹೀಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿದ್ದು , ಅದರಲ್ಲಿ ಬಾಲವರ್ಗ, ಕಿಶೋರವರ್ಗ ಮತ್ತು ತರುಣವರ್ಗ ಎಂಬ ಮೂರು ವಿಭಾಗಗಳಿದ್ದು, ವಿವೇಕಾನಂದ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿಗಳು ಗಣನೀಯ ಸಾಧನೆಗೈದಿರುವರು.

ಬಾಲ ವರ್ಗದ ವಿಜ್ಞಾನ ಮಾದರಿ ವಿಭಾಗದ ವಿದ್ಯುಚ್ಚಕ್ತಿ ಸಂರಕ್ಷಣೆ ವಿಷಯದಲ್ಲಿ ರಾಮ್ ಧ್ಯಾನ್ (7ನೇ ತರಗತಿ ) – ದ್ವಿತೀಯ ಸ್ಥಾನ, ವಿಜ್ಞಾನ ರಸಪ್ರಶ್ನೆಯಲ್ಲಿ- ಸನ್ಮಿತ್ ಬಿ (8ನೇ ತರಗತಿ ), ಅಧಿತ್ರಿ. ಎ.ಆಳ್ವ (7ನೇ ತರಗತಿ ) ಮತ್ತು ಸ್ವಸ್ತಿ ಎಂ. ಭಟ್ (6ನೇ ತರಗತಿ ) ತಂಡವು
ದ್ವಿತೀಯ ಸ್ಥಾನ, ಗಣಿತ ಮಾದರಿ ಪ್ರದರ್ಶನದಲ್ಲಿ ಸಾನಿಧ್ಯ ಎಸ್ ರಾವ್ (7ನೇ ತರಗತಿ )-ತೃತೀಯ ಸ್ಥಾನ, ಗಣಿತ ಪ್ರಯೋಗದಲ್ಲಿ ಅಭಿಜ್ಞಾ (8ನೇ ತರಗತಿ) -ಪ್ರಥಮ ಸ್ಥಾನ, ವೇದಗಣಿತ ಪತ್ರವಾಚನದಲ್ಲಿ ಅಚಿಂತ್ಯ ಟಿ. ಭಟ್ (7ನೇ ತರಗತಿ )-ದ್ವಿತೀಯ ಸ್ಥಾನ ಪಡೆದಿರುವರು .

ಕಿಶೋರ ವರ್ಗದ ವಿಜ್ಞಾನ ರಸಪ್ರಶ್ನೆಯಲ್ಲಿ, ಆರುಷಿ ಎಸ್ ಪುತ್ತೂರಾಯ (10ನೇ ತರಗತಿ) ಅಚಿಂತ್ಯ ಕೃಷ್ಣ (10ನೇ ತರಗತಿ) ಮತ್ತು ಸೃಷ್ಟಿ. ಎ (10 ನೇ ತರಗತಿ) ತಂಡವು ತೃತೀಯ ಸ್ಥಾನ, ವಿಜ್ಞಾನ ಪತ್ರ ವಾಚನದಲ್ವಿ ಸುದೀಕ್ಷಾ ಎಸ್ ಭಟ್(9ನೇ ತರಗತಿ)ಪ್ರಥಮ ಸ್ಥಾನ, ವೇದಗಣಿತ ರಸಪ್ರಶ್ನೆಯಲ್ಲಿ ಪ್ರಥಮ್ ಟಿ ರಾವ್(10 ನೇ ಮನ್ವಿತ್ ಶಂಕರ್(10 ನೇ ತರಗತಿ )ಮತ್ತು ಚಿಂತನ್. ಹೆಚ್. ಶೆಟ್ಟಿ(10 ನೇ ತರಗತಿ)ತಂಡವು ಪ್ರಥಮ ಸ್ಥಾನ, ಕ್ಷೇತ್ರ ಗಣಿತ ಸಂಬಂಧಿತ ಪ್ರದರ್ಶನದಲ್ಲಿ ತನಿಷ್. ಎಂ.ಭಟ್(10ನೇ ತರಗತಿ)ತೃತೀಯ ಸ್ಥಾನ, ಗಣಿತ ಪ್ರಯೋಗದಲ್ಲಿ ಭಾರವಿ.ಕೆ. ಭಟ್ 10ನೇ ತರಗತಿ) ಪ್ರಥಮ ಸ್ಥಾನ, ವೇದಗಣಿತ ಪತ್ರವಾಚನದಲ್ಲಿ ಜನ್ಯ. ಪಿ(9 ನೇ ತರಗತಿ)ದ್ವಿತೀಯ ಸ್ಥಾನ, ಸಂಸ್ಕೃತಿ ಜ್ಞಾನ ಆಶುಭಾಷಣದಲ್ಲಿ ಮೇಧಾ ಭಟ್ (9ನೇ ತರಗತಿ) ದ್ವಿತೀಯ ಸ್ಥಾನ ಪಡೆದಿರುವರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here