






ಕಾಣಿಯೂರು: ಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವಜಾರೋಹಣ ಮಾಡಿದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸೀತಾರಾಮ ಕೆ ಶುಭಾಶಯಗಳನ್ನು ಕೋರಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿಯನ್ ಪಿ ಡಿ ಕೃಷ್ಣ ಕುಮಾರ್ ರೈ ದೇವಸ್ಯರವರು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಗೆಯೇ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಸೋಮಪ್ಪ. ಕೆ. ಇವರು ಮಾತನಾಡಿ ಹಿರಿಯರಿಗೆ ಗೌರವ ಕೊಡುವುದನ್ನು ಮಕ್ಕಳಿಗೆ ಮನೆಯಿಂದಲೇ ಕಲಿಸಬೇಕು ಆಗ ಸಂಸ್ಕಾರವಂತರಾಗಿ ದೇಶದ ಅಭಿಮಾನ ಅವರಲ್ಲಿ ಮೂಡಿಸಲು ಸಾಧ್ಯ ಎಂದರು. ಮತ್ತೋರ್ವ ಮುಖ್ಯ ಅತಿಥಿ ನಿವೃತ್ತ ಪಿಡಿಓ ಶ್ರೀ ಸುಂದರ ಗೌಡ ಸಜಂಕು ಮಾತನಾಡಿ ಸಂಪೂರ್ಣ ಸ್ವತಂತ್ರ ಜೀವನ ಇಂದು ನಾವು ನಡೆಸುತ್ತಿದ್ದೇವೆ ಎಂದರೆ ಅದರ ಹಿಂದೆ ತ್ಯಾಗ, ಬಲಿದಾನದ ಚರಿತ್ರೆಯಿದೆ, ಅದನ್ನು ಅರಿತು ನಾವು ದೇಶಕ್ಕಾಗಿ ಹೋರಾಡಿದ ಮಹಾನ್ ವೀರರಿಗೆ ಗೌರವ ಸಲ್ಲಿಸಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ರೇವತಿ ಮೇಡಂರವರು ಮಾತನಾಡಿ ದೈಹಿಕ ಅರೋಗ್ಯಯುತ ಪರಿಸರ ನಮ್ಮ ಲ್ಲಿ ಬೆಳೆಸಿಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.



ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಎ ವಿ ಜಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ವೆಂಟ್ರಮಣ ಗೌಡ ಕಳುವಾಜೆ ಮಾತನಾಡಿ ಮಕ್ಕಳಲ್ಲಿ ದೇಶಪ್ರೇಮ ತುಂಬುವ ಹಾಗೂ ದೇಶವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತಾಗಿ ವಿವರಿಸಿದರು. ಹಾಗೆಯೇ ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿಯನ್ ಶ್ರೀ ಶ್ರೀಧರ ಕಣಜಾಲು, ರೋಟರಿಯನ್ ಶ್ರೀ ದಾಮೋದರ್, ಬ್ಯಾಂಕ್ ಆಫ್ ಬರೋಡದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಶ್ರೀ ಯು ಪಿ ರಾಮಕೃಷ್ಣ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂರ್ಭದಲ್ಲಿ ಶಾಲಾಭಿವೃದ್ದಿಗೆ ಸಹಕರಿಸಿದ ನಿವೃತ್ತ ಪಿಡಿ ಓ ಶ್ರೀ ಸುಂದರ ಗೌಡ ಸಜಂಕು, ಪೋಷಕರಾದ ವಿನಯಚಂದ್ರ ಸಜಂಕು ಇವರಿಗೆ ಶಾಲಾ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸುಂದರ ಗೌಡ ದೇವಸ್ಯ, ಕಾರ್ಯದರ್ಶಿಗಳಾದ ಶ್ರೀ ವಿಶ್ವನಾಥ ಕೊಪ್ಪ, ದೈಪಿಲ ಕ್ರೀಡಾ ಸೇವಾಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬುದ್ದಿವಂತರು ಶ್ರೀ ವಸಂತ ಕುಂಬಾರ, ಊರಿನ ಗಣ್ಯರು, ಹಿರಿಯರು, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು, ಹಾಗೂ ಉಪಾಧ್ಯಕ್ಷರುಗಳು, ಹಿರಿಯ ವಿದ್ಯಾರ್ಥಿಗಳು, ಅಂಗನವಾಡಿ ಸಿಬ್ಬಂದಿಗಳು ಮತ್ತು ಪುಟಾಣಿಗಳು, ಶಾಲಾ ಪೋಷಕವೃಂದದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳ ಸಮ್ಮುಖದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು. ಬಳಿಕ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿಗೀತೆ, ಹಾಗೂ ದೇಶಭಕ್ತಿ ಬಿಂಬಿಸುವ ನೃತ್ಯಗಳನ್ನು ಮಾಡಿದರು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಜ್ಯೋತಿ ದೇವರಮನೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ಅತಿಥಿ ಶಿಕ್ಷಕ ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಸಿ , ಶಿಕ್ಷಕಿ ಕುಮಾರಿ ಪೃಥ್ವಿ ವಂದಿಸಿದರು










