








ಕಾಣಿಯೂರು: ದ. ಕ ಜಿ . ಹಿ ಪ್ರಾ ಶಾಲೆ ನಾಣಿಲದಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿಯವರು ಧ್ವಜಾರೋಹಣ ನೆರವೇರಿಸಿ. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಯುವಜನತೆಯು ಸದೃಢ ಭಾರತದ ಏಳಿಗೆಗೆ ಶ್ರಮಿಸಬೇಕು ಎಂದರು.



ಹಾಗೂ ಊರಿನ ಮಹನೀಯರು ಶಾಲಾ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ನಿವೃತ್ತ ಮುಖ್ಯ ಗುರುಗಳಾದ ಪದ್ಮಯ್ಯ ಗೌಡ ಮಾತನಾಡುತ್ತ ಸರಕಾರಿ ಶಾಲೆಗಳ ಏಳಿಗೆಗೆ ಊರಿನ ಮಾನ್ಯರು ಶ್ರಮಿಸಬೇಕೆಂದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶೋಭಾ ಬಾಕಿಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನೂತನ ಭಟ್. ಕಾಣಿಯೂರು ಗ್ರಾಮ ಪಂಚಾಯಿತಿನ ಮಾಜಿ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ. ಮಾಜಿ ಪಂಚಾಯತ್ ಸದಸ್ಯರಾದ ಸುಲೋಚನ ಮಿಯೋಲ್ಪೆ. ತಾಯಿ ಸಮಿತಿಯ ಅಧ್ಯಕ್ಷರಾದ ಮೋಹಿನಿ ಬಾಕಿಲ. ಮೋನಪ್ಪ ಗೌಡ ಅಂಬುಲ. ಉಪಸ್ಥಿತರಿದ್ದರು,ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಣೇಶ್ ಕುಂಬ್ಲಾಡಿ, ಹಳೆ ವಿದ್ಯಾರ್ಥಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ವಿಜಿತ್ ಮಾಚಿಲ, ನೇಮಣ್ಣ ಗೌಡ ಅಂಬುಲ, ಧರ್ಮಪಾಲ ಅಂಬುಲ, ನಾಣಿಲ, ಮುದುವ ಅಂಗನವಾಡಿ ಕಾರ್ಯಕರ್ತರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಊರಿನ ಮಾನ್ಯರು, ವಿದ್ಯಾರ್ಥಿಗಳು, ಶಿಕ್ಷಕ ವೃಂದ ಭಾಗವಹಿಸಿದರು. ಪುಟಾಣಿಗಳಾದ ವರ್ಷಿಕ ಡಿ. ವಿ, ರಿತ್ವಿ ಪುಣ್ಯಶ್ರೀ , ಶಾನ್ವಿ, ವರ್ಣಿಕ ಡಿ.ವಿ, ಐಶಾನಿ ರೈ, ಪ್ರಾರ್ಥಿಸಿದರು. ಪ್ರಭಾರ ಮುಖ್ಯಗುರು ನಂದಿನಿ ಸ್ವಾಗತಿಸಿ, ಅತಿಥಿ ಶಿಕ್ಷಕಿ ಸುಗುಣ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ವಾಣಿ , ಗೌರವ ಶಿಕ್ಷಕಿಯರಾದ ಶಿಶ್ಮಿತಾ ರೈ, ಸುಮಲತಾ ಸಹಕರಿಸಿದರು. ಸಹ ಶಿಕ್ಷಕ ಸುನಿಲ್ ವಂದಿಸಿದರು.










