






ಪುತ್ತೂರು: ಆನಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯು ಆ. 13ರ ಗುರುವಾರದಂದು ಬೆಳಗ್ಗೆ 10:30ಕ್ಕೆ ಸಂಘದ ಆವರಣದಲ್ಲಿ ನಡೆಯಿತು.


ಸಂಘದ ಅಧ್ಯಕ್ಷರಾದ ಯಂ.ವನಜಾಕ್ಷಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದಲ್ಲಿ 1,45,930.11 ಲೀಟರ್ ಹಾಲು ಖರೀದಿಯಾಗಿದೆ. 13,828.50ಲೀಟರ್ ಸ್ಧಳೀಯ ಹಾಲು ಮಾರಾಟವಾಗಿದೆ. ಹಾಲು ವ್ಯಾಪಾರ, ಪಶು ಆಹಾರ ಮಾರಾಟ ಹಾಗೂ ಇತರ ಆದಾಯಗಳಿಂದ ಒಟ್ಟು 4,04917.64ರೂ ನಿವ್ವಳ ಲಾಭ ಬಂದಿದೆ. ಸಂಘವು ಪ್ರಾರಂಭವಾದಾಗ 180 ಲೀಟರ್ ಹಾಲು ಇತ್ತು. ಈಗ ಮೂರನೇ ವರ್ಷಕ್ಕೆ ಕಾಲಿಟ್ಟಾಗ 500 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಪ್ರಸ್ತುತ 410 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಎಲ್ಲಾ ಸದಸ್ಯರು ಹೈನುಗಾರಿಕೆಯಲ್ಲಿ ಆಸಕ್ತಿ ತೋರಿಸಿ ಎಂದು ಹೇಳಿದರು. ಬಳಿಕ ಸದಸ್ಯರಿಗೆ ಲೀಟರ್‌ಗೆ 1.32ಪೈಸೆ ಬೋನಸ್, 10% ಡಿವಿಡೆಂಡ್ ನೀಡುವುದಾಗಿ ಘೊಷಣೆ ಮಾಡಿದರು.




ಮುಖ್ತ ಅತಿಥಿಯಾಗಿ ಆಗಮಿಸಿದ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ.ಪಿ ಮಾತನಾಡಿ ಒಕ್ಕೂಟದಿಂದ ಸಿಗುವ ಅನುದಾನದ ಬಗ್ಗೆ ತಿಳಿಸಿ, ಸಂಘದ ಸಂಪೂರ್ಣ ವಹಿವಾಟುಗಳನ್ನು ವಿವರವಾಗಿ ಸದಸ್ಯರಿಗೆ ಓದಿ ಮಾಹಿತಿ ನೀಡಿದರು. ದನಗಳಿಗೆ ಯಾವ ರೀತಿ ಪಶು ಆಹಾರ ನೀಡಬೇಕು, ಹಾಲಿನ ಗುಣಮಟ್ಟ ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿದರು. ರಾಸುಗಳಿಗೆ ವಿಮೆ ಮಾಡಿಸಿ, ಸರ್ಕಾರದ ಪ್ರೋತ್ಸಾಹಧನ ಸದಸ್ಯರ ಖಾತೆಗೆ ನೇರವಾಗಿ ಜಮೆಯಾಗುತ್ತದೆ ಎಂದು ಹೇಳಿದರು.
2025-26ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಲ್ಲಿ 24,708.49 ಲೀ ಹಾಲು ಹಾಕಿದ ನಿರ್ದೇಶಕರಾದ ಶ್ರೀಮತಿ ವಿಜಯ ವಿಠಲ ಶೆಟ್ಟಿ ಕಠಾರ ಪ್ರಥಮ ಸ್ಧಾನ ಪಡೆದುಕೊಂಡರು. 23247.76 ಲೀಟರ್ ಹಾಲು ಹಾಕಿದ ನಿರ್ದೇಶಕರಾದ ಶ್ರೀಮತಿ ವಿಮಲ ಶಿವಣ್ಣ ಗೌಡ ದ್ವಿತೀಯ ಸ್ಧಾನ, 10,745.39 ಲೀಟರ್ ಹಾಲು ಹಾಕಿದ ಸದಸ್ಯರಾದ ಉಷಾ ಸಾಂತಪ್ಪ ಗೌಡ ತೃತೀಯ ಸ್ಧಾನ ಪಡೆದುಕೊಂಡಿದ್ದಾರೆ. ಇವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಹಾಲು ಹಾಕಿದ ಉಳಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಾದ್ಯಕ್ಷರಾದ ಜ್ಯೋತಿ ನಾಯಕ್, ನಿರ್ದೇಶಕರಾದ ವಿಜಯ, ಸುಜಾತ, ಹೇಮಾವತಿ, ಯಂ ಸುಂದರಿ, ಶಶಿಕಲಾ, ಜಯಂತಿ ಲತಾ.ಪಿ, ದೇವಕಿ, ಲಲಿತಾ ಉಪಸ್ಧಿತರಿದ್ದರು. ಸಂಘದ ಉಪಾಧ್ಯಕ್ಷರಾದ ಜ್ಯೋತಿ ನಾಯಕ್ ಸ್ವಾಗತ ಮಾಡಿ ನಿರೂಪಣೆ ಮಾಡಿದರು. ಸಂಘದ ಸದಸ್ಯರಾದ ಶ್ರೀಮತಿ ಹೇಮಾವತಿ, ಶ್ರೀಮತಿ ವಿದ್ಯಾ, ಸಂಘದ ಸಿಬ್ಬಂದಿ ಶ್ರೀಮತಿ ರೇಣುಕಾ ಪ್ರಾರ್ಥನೆ ಮಾಡಿದರು. ಸಂಘದ ನಿರ್ದೇಶಕರಾದ ಶ್ರೀಮತಿ ಲತಾ.ಪಿ ಧನ್ಯವಾದ ಮಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ದಿವ್ಯಾ ವರದಿ ಮಂಡಿಸಿದರು. ಸಂಘದ ಕೃತಕ ಗರ್ಭ ಕಾರ್ಯಕರ್ತ ವಿಕೇಶ್ ಶೆಟ್ಟಿ ಹಾಗೂ ಹಾಲು ಪರಿವೀಕ್ಷಕಿ ಶ್ರೀಮತಿ ರೇಣುಕಾ ಸಹಕರಿಸಿದರು. ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸದಸ್ಯರು ಉಪಸ್ಧಿತರಿದ್ದರು.










