ಸುದಾನ ವಿದ್ಯಾರ್ಥಿನಿ ಸಾನ್ವಿತಾ ಎಂ.ರೈ ಕರಾಟೆಯಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆ

0

ಪುತ್ತೂರು: ಸುದಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಸಾನ್ವಿತಾ ಎಂ. ರೈ ಕರಾಟೆಯಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ.


ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಶನ್ 2030ರೊಳಗೆ 8 ಕೋಟಿ ಭಾರತೀಯ ನಾಗರಿಕರಿಗೆ ಉಚಿತ ಆತ್ಮರಕ್ಷಣಾ ತರಬೇತಿ ನೀಡುವ ಉದ್ದೇಶ ಹೊಂದಿದೆ. ಕರಾಟೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಂಸ್ಥೆಯ ವತಿಯಿಂದ 3ನೇ ಗಿನ್ನೆಸ್ ವಿಶ್ವ ದಾಖಲೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಿನ್ನೆಸ್‌ ಹೆಡ್‌ಕ್ವಾರ್ಟಸ್ ಲಂಡನ್‌ನಿಂದ ಗಿನ್ನೆಸ್ ಪ್ರತಿನಿಧಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.


ಭಾಗವಹಿಸುವ ಪ್ರತಿಯೊಬ್ಬ ಕರಾಟೆ ಪಟುವೂ 30 ನಿಮಿಷ ನಿರಂತರವಾಗಿ 10 ಕರಾಟೆ ತಂತ್ರಗಳನ್ನು ಪ್ರದರ್ಶಿಸಿ ಹೊಸ ಗಿನ್ನೆಸ್‌ ವಿಶ್ವ ದಾಖಲೆ ಸ್ಥಾಪಿಸುವ ಪ್ರಯತ್ನ ಮಾಡಿದ್ದಾರೆ. 2026ರ ಆ. 16ರಂದು ಚೆನ್ನೈಯ ಕೋಯಂಬೇಡು ಸೇಂಟ್ ಥಾಮಸ್‌ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಪುತ್ತೂರಿನ ಸುದಾನ‌ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಸಾನ್ವಿತಾ ಎಂ‌. ರೈ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ.


ಶಿಹಾನ್‌ ಸುರೇಶ್ ಎಂ. ಅವರ ಮಾರ್ಗದರ್ಶನದಲ್ಲಿ ಯುನೈಟೆಡ್ ಕರಾಟೆ ಬುಡೋಕಾನ್ ಇಂಟರ್‌ನ್ಯಾಷನಲ್‌ನಲ್ಲಿ ತರಬೇತಿ ಪಡೆದ ಇವರು ಉರ್ಲಾಂಡಿಯ ಮನೋಜ್ ಮತ್ತು ಸ್ವಪ್ನಾ ರೈ ದಂಪತಿಯ ಎರಡನೇ ಪುತ್ರಿ.

LEAVE A REPLY

Please enter your comment!
Please enter your name here