







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೂಲನಾಗ ಸನ್ನಿಧಿಯಲ್ಲಿ ನಾಗರಪಂಚಮಿ ವಿಶೇಷವಾಗಿ ನಡೆಯಿತು.



ದೇವಳದಲ್ಲಿ ಪ್ರಶ್ನಾಚಿಂತನೆಯ ಮೂಲಕ ಸಾನಿಧ್ಯ ವೃದ್ಧಿಗಾಗಿ ದೈವಜ್ಞರ ಸಲಹೆ, ತಂತ್ರಿಗಳ ಮಾರ್ಗದರ್ಶನದಂತೆ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ನೇತೃತ್ವದ ಸಮಿತಿಯು ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈಗಾಗಲೇ ದೇವಳದ ಬಳಿಯಿದ್ದ ವಾಸುಕಿ ನಾಗಸನ್ನಿಧಿಯನ್ನು ಮೂಲನಾಗ ಸನ್ನಿಧಿಯಲ್ಲಿ ಪ್ರತಿಷ್ಠೆಗೊಳಿಸಿದ ಬಳಿಕ ಈ ವರ್ಷದ ನಾಗರ ಪಂಚಮಿ ಮೂಲನಾಗ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು ಭಕ್ತರು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ಬಂದು ನಾಗ ದೇವರಿಗೆ ಸೀಯಾಳ, ಹಾಲು ಸಮರ್ಪಣೆ ಮಾಡಿದರು.




ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಭಕ್ತರು ಸಮರ್ಪಣೆ ಮಾಡಿದ ಹಾಲು, ಸೀಯಾಳವನ್ನು ನಾಗ ದೇವರಿಗೆ ಅಭಿಷೇಕ ಮಾಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸಹಿತ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.










