






ಪುತ್ತೂರು: ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.


ದೇವಸ್ಥಾನದ ನಾಗಬನ ಮತ್ತು ಸನ್ನಿಧಿಯಲ್ಲಿ ವಿಶೇಷ ಪೂಜೆ, ಸರ್ಪದೇವರಿಗೆ ಹಾಲು, ಹೂವು, ಅರಶಿನ ಕುಂಕುಮ ಅರ್ಪಿಸಲಾಯಿತು.ಬೆಳಗ್ಗಿನಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದುರ್ಗಾಪರಮೇಶ್ವರಿ ದೇವಿ ಮತ್ತು ನಾಗದೇವರ ದರ್ಶನ ಪಡೆದರು. .ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರು ಮತ್ತು ಗ್ರಾಮಸ್ಥರು ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.













