






ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗರಪಂಚಮಿ ಪ್ರಯುಕ್ತ ಸಾಮೂಹಿಕ ನಾಗತಂಬಿಲ, ನಾಗನಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ ಸಹಿತ ವಿವಿಧ ಸೇವೆಗಳು ನಡೆದವು.


ಕ್ಷೇತ್ರದ ಅರ್ಚಕ ಕೇಶವರಾಜ ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಉದಯಶಂಕರ್ ಭಟ್ ಪದಾಳ, ಕಾರ್ಯದರ್ಶಿ ಕೇಶವ ರಂಗಾಜೆ, ಪ್ರಮುಖರಾದ ಶಂಕರನಾರಾಯಣ ಭಟ್ ಬೊಳ್ಳಾವು, ಪ್ರತಾಪ್ ಪೆರಿಯಡ್ಕ, ಜಯಗೋವಿಂದ ಶರ್ಮ, ಸತೀಶ್ ರಾವ್ ನೆಡ್ಚಿಲ್, ಕೃಷ್ಣಪ್ಪ ಗೌಡ ಬೊಳ್ಳಾವು, ಧರ್ನಪ್ಪ ನಾಯ್ಕ ಬೊಳ್ಳಾವು ಮತ್ತಿತರರು ಉಪಸ್ಥಿತರಿದ್ದರು.













