ಕಣಿಯಾರು ತರವಾಡು ಮನೆಯಲ್ಲಿ ನಾಗರ ಪಂಚಮಿ ಆಚರಣೆ

0

 ಬಡಗನ್ನೂರು : ಕಣಿಯಾರು ತರವಾಡು ಮನೆಯಲ್ಲಿ  ನಾಗರ ಪಂಚಮಿ ಹಬ್ಬವನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.

ತರವಾಡಿನ ನಾಗ ಸಾನಿಧ್ಯದಲ್ಲಿ  ನಾಗ  ದೇವರಿಗೆ  ಹಾಲು ಮತ್ತು ಸೀಯಾಳ ಅಭಿಷೇಕ ನಡೆಯಿತು. ಬಳಿಕ  ಹೂವು, ಅರಶಿನ  ಕುಂಕುಮ ಸಮರ್ಪಣೆ ನಡೆಯಿತು. ಬಳಿಕ ನಾಗ ಸಾನಿಧ್ಯಲ್ಲಿರುವ ರಕ್ತೇಶ್ವರಿ ಹಾಗೂ ಗುಳಿಗರಾಜನಿಗೆ ಸೀಯಾಳ ಸಮರ್ಪಣೆ ಮಾಡಿ ಪೂಜಿಸಲಾಯಿತು.ನಾಗದೇವರಿಗೆ ಮಹಾ ಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ  ಕುಟುಂಬದ ಯಜಮಾನ ತಿಮ್ಮಪ್ಪ ಪೂಜಾರಿ  ಸಹಿತ ಕುಟುಂಬದ ಸದಸ್ಯರು ಹಾಗೂ ಊರಿನವರು ಭಾಗವಹಿಸಿದರು.

LEAVE A REPLY

Please enter your comment!
Please enter your name here