ಕುಂಬ್ರ ಕೆ.ಐ.ಸಿ ಯಲ್ಲಿ 80ನೇ ಸ್ವಾತಂತ್ರ್ಯೋತ್ಸವ, ಕಲಾ ಸ್ಪರ್ಧೆ, ಕ್ರೀಡಾಕೂಟ

0

ಪುತ್ತೂರು: ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ, ಪ್ರತಿಜ್ಞೆ, ಭಾಷಣ ಹಾಗೂ ವಿವಿಧ ಸ್ಪರ್ಧೆಗಳು ಮತ್ತು ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಅಬೂಬಕ್ಕರ್ ಖಾಸಿಮಿ ಅವರ ನೇತೃತ್ವದಲ್ಲಿ ದುವಾ ನಡೆಯಿತು. ಇಸ್ಮಾಯಿಲ್ ಮದನಿ ಅವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಝಮ್ಮಿಲ್ ಕರಾಯ ಸ್ವಾಗತಿಸಿದರು. ತೌಸೀಪ್ ಕೆದಂಬಾಡಿ ಅವರು ಆಶಂಸ ಭಾಷಣ ಮಾಡಿದರು. ಶಿಹಾಸ್ ಸವಣೂರು ಅವರ ನೇತೃತ್ವದಲ್ಲಿ ಪ್ರತಿಜ್ಞೆ ನಡೆಯಿತು. ಜುಬೇರ್ ಕುಂತೂರ್ ವಂದಿಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಜ್ಞಾನ, ಸೃಜನಶೀಲತೆ, ದೇಶಪ್ರೇಮ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಕ್ವಿಜ್ ಸ್ಪರ್ಧೆಯಲ್ಲಿ ಮುಜಮ್ಮಿಲ್ ವೇಣೂರು ಮತ್ತು ಮಸೂದ್ ಕಬಕ ಪ್ರಥಮ ಸ್ಥಾನ ಪಡೆದರೆ, ರಝಿಕ್ ಸುರುಳಿ ದ್ವಿತೀಯ ಸ್ಥಾನ ಗಳಿಸಿದರು.ಚರ್ಚಾ ಸ್ಪರ್ಧೆಯಲ್ಲಿ ಉತ್ತಮ ವಾಗ್ಮಿಯಾಗಿ ಮುಝಮ್ಮಿಲ್ ಕರಾಯ ಅವರು Best Debator Award ಪಡೆದುಕೊಂಡರು.ಪ್ರಬಂಧ ಸ್ಪರ್ಧೆಯಲ್ಲಿ ಮಿದಿಲಾಜ್ ಕಿನ್ಯ ಪ್ರಥಮ ಹಾಗೂ ಮುಝಮ್ಮಿಲ್ ಕರಾಯ ದ್ವಿತೀಯ ಸ್ಥಾನ ಪಡೆದರು.ಚಿತ್ರಕಲೆ ಸ್ಪರ್ಧೆಯಲ್ಲಿ ಮೊಹಮ್ಮದ್ ಮಸೂದ್ ಎ.ಹೆಚ್ ಪ್ರಥಮ ಹಾಗೂ ಮೊಹಮ್ಮದ್ ಶಾಝ್ ದ್ವಿತೀಯ ಸ್ಥಾನ ಗಳಿಸಿದರು.ಘೋಷವಾಕ್ಯ ಸ್ಪರ್ಧೆಯಲ್ಲಿ ಮೊಹಮ್ಮದ್ ರಾಝಿಕ್ ಪ್ರಥಮ ಹಾಗೂ ಮೊಹಮ್ಮದ್ ಅನಸ್ ಕೆ.ಹೆಚ್ ದ್ವಿತೀಯ ಸ್ಥಾನ ಪಡೆದರು.

ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ ಮತ್ತು ತಂಡ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನೂ ಆಯೋಜಿಸಲಾಗಿತ್ತು. ವಾಲಿಬಾಲ್ ಪಂದ್ಯಾಟದಲ್ಲಿ ಡಿಗ್ರಿ 2 ತಂಡ ಪ್ರಥಮ ಹಾಗೂ ಡಿಗ್ರಿ 3 ತಂಡ ದ್ವಿತೀಯ ಸ್ಥಾನ ಪಡೆಯಿತು. ಕಬಡ್ಡಿ ಪಂದ್ಯಾಟದಲ್ಲೂ ಡಿಗ್ರಿ 2 ತಂಡ ಪ್ರಥಮ ಹಾಗೂ ಡಿಗ್ರಿ 3 ತಂಡ ದ್ವಿತೀಯ ಸ್ಥಾನ ಗಳಿಸಿತು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳು ಮತ್ತು ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸ್ಪರ್ಧಾತ್ಮಕ ಮನೋಭಾವ, ನಾಯಕತ್ವ, ಸೃಜನಶೀಲತೆ ಹಾಗೂ ಸಹಕಾರದ ಮನೋಭಾವವನ್ನು ಬೆಳೆಸುವಲ್ಲಿ ಸಹಕಾರಿಯಾದವು. ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

LEAVE A REPLY

Please enter your comment!
Please enter your name here