







ಪುತ್ತೂರು : ಸ್ನೇಹ ಮಹಿಳಾ ಮಂಡಲ ಪರ್ಪುಂಜ ಇದರ ಆಶ್ರಯದಲ್ಲಿ ’ಆಟಿದ ಕೂಟ’ ಕಾರ್ಯಕ್ರಮವು ಮುರುವ ಪರ್ಪುಂಜದಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ಭವ್ಯ ವೇಣುಗೋಪಾಲ್ ಪಡುಮಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಟಿ ತಿಂಗಳ ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಸಭಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಸಡಗರ ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ ಸ್ನೇಹ ಮಹಿಳಾ ಮಂಡಲದ ಗೌರವ ಸಲಹೆಗಾರರಾದ ರಾಜೇಶ್ ರೈ ಪರ್ಪುಂಜ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಕುರಿತು ಶುಭನುಡಿಗಳನ್ನಾಡಿದರು.



ವೇದಿಕೆಯಲ್ಲಿ ಸ್ನೇಹ ಮಹಿಳಾ ಮಂಡಲದ ಗೌರವ ಅಧ್ಯಕ್ಷೆ ಬೇಬಿ ರೈ, ಗೌರವ ಸಲಹೆಗಾರ ಅನಿಲ್ ರೈ ಬಾರಿಕೆ, ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಎಸ್ ಹಾಗೂ ಸ್ನೇಹ ಯುವಕ ಮಂಡಲದ ಅಧ್ಯಕ್ಷ ಅಶ್ವಿನ್ ಪೂಜಾರಿ ಪಿದಪಟ್ಲ ಉಪಸ್ಥಿತರಿದ್ದರು. ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಎಸ್ ಸ್ವಾಗತಿಸಿದರು. ಶ್ರೇಯಾ ಆರ್. ರೈ ಪ್ರಾರ್ಥಿಸಿದರು. ಕಾರ್ಯದರ್ಶಿ ರೇಖಾ ಎಸ್. ವಂದಿಸಿದರು. ರಕ್ಷಾ ಕೆ. ಆರ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ನೇಹ ಮಹಿಳಾ ಮಂಡಲ ಹಾಗೂ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದು, ಸ್ನೇಹ ಯುವಕ ಮಂಡಲದ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.













