






ಮಾಡನ್ನೂರ್: ನೂರುಲ್ ಹುದಾ ಮಾಡನ್ನೂರ್ ಸಂಸ್ಥೆಯ 11ನೇ ಸ್ಥಾಪಕ ದಿನಾಚರಣೆ “ಮಿಲನ್ ಮಾಡನ್ನೂರ್ – 2026” ಕಾರ್ಯಕ್ರಮವು 2026 ಆಗಸ್ಟ್ 19ರಂದು ಸಂಜೆ 6:30ಕ್ಕೆ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಮಖಾಂ ಝಿಯಾರತ್, ಅಭಿನಂದನಾ ಕಾರ್ಯಕ್ರಮ, ಗೌರವಾರ್ಪಣೆ, ಬುರ್ದಾ ಮಜ್ಲಿಸ್ ಮತ್ತು ಔತಣ ಕೂಟ ನಡೆಯಲಿದೆ.ನೂರುಲ್ ಹುದಾದ 11 ವರ್ಷಗಳ ಸಂಭ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ. ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.













