






ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಪುತ್ತೂರಿನ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಾಗರಪಂಚಮಿ, ತಿಂಗಳ ಸಂಕ್ರಮಣ, ಮಹಾಪೂಜೆ ಮುಂತಾದ ಧಾರ್ಮಿಕ ಹಬ್ಬವನ್ನು ಅತ್ಯಂತ ಸಡಗರ ಹಾಗೂ ಧಾರ್ಮಿಕ ಕಾರ್ಯವು ಶ್ರದ್ಧಾಭಕ್ತಿಯಿಂದ ಆ.17 ರಂದು ಶ್ರೀ ಕ್ಷೇತ್ರದಲ್ಲಿ ಆಚರಿಸಲಾಗಿದ್ದು ಆ.18 ರಂದು ತಿಂಗಳ ಷಷ್ಠಿ ಸಮಾರಾಧನೆ ಹಾಗೂ ಅನ್ನಸಂತರ್ಪಣೆ ಕಾರ್ಯ ನೆರವೇರಿತು. ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.


ಅರ್ಚಕ ವೆಂಕಟೇಶ ಭಟ್ ರವರ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳು ಜರಗಿದ್ದು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ವರಪ್ರಸಾದಕ್ಕೆ ಭಾಜನರಾದರು.



ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ ಸೂರಪ್ಪ ಗೌಡ ಸಂಜಯನಗರ, ಚಂದ್ರಶೇಖರ ಕಲ್ಲಗುಡ್ಡೆ, ಮಹೇಶ್ ಕಾವೇರಿಕಟ್ಟೆ, ರಕ್ಷಿತ್ ನಾಯ್ಕ್ ದರ್ಬೆ, ವಸಂತ ನಾಯ್ಕ ಬೆದ್ರಾಳ, ಲಲಿತಾ ಕೆ, ರೇಖಾ ಯಶೋಧರ, ಸಿಬ್ಬಂದಿ ಭರತ್, ಗುಮಾಸ್ತ ರಘುನಾಥ್ ಪೂಜಾರಿ ಸಹಕರಿಸಿದರು.










