







ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.18ರಂದು ಶುದ್ಧ ಷಷ್ಠಿ ಪೂಜೆ ,ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಅರ್ಚಕ ಪ್ರವೀಣ್ ಶಂಕರ್ ಅವರು ಪೂಜಾ ಕೈಂಕರ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ,ಸೇವಾಕರ್ತರಾದ ಚಂದ್ರಶೇಖರ ರೈ ನಳೀಲು ಹಾಗೂ ಮನೆಯವರು, ಬಾಲಕೃಷ್ಣ ಗೌಡ ಬಾರ್ತಿಕುಮೇರು ಹಾಗೂ ಮನೆಯವರು, ದೇವಸ್ಥಾನದ ಮೊಕ್ತೇಸರರು, ಭಕ್ತಾದಿಗಳು ಉಪಸ್ಥಿತರಿದ್ದರು.




ಪ್ರತೀ ತಿಂಗಳ ಷಷ್ಠಿಯಂದು ಷಷ್ಠಿ ಪೂಜೆ ,ಅನ್ನಸಂತರ್ಪಣೆ
ದೇವಸ್ಥಾನದಲ್ಲಿ ಪ್ರತೀ ತಿಂಗಳ ಶುದ್ದ ಷಷ್ಟಿಯಂದು ಮಧ್ಯಾಹ್ನ ಷಷ್ಟಿ ಪೂಜೆ, ಅನ್ನಸಂತರ್ಪಣೆ ಪ್ರತೀ ತಿಂಗಳ ಸಂಕಷ್ಟಿಯಂದು ಮಹಾಗಣಪತಿ ಹೋಮ ನಡೆಯುತ್ತದೆ.
ಪ್ರತೀ ತಿಂಗಳ ಸಂಕ್ರಮಣದಂದು ರಾತ್ರಿ ರಂಗಪೂಜೆ ನಡೆಯಲಿದೆ.
ಸೆ.14ರಂದು ಶ್ರೀ ಗಣೇಶ ಚತುರ್ಥಿಯ ಅಂಗವಾಗಿ ದೇವಸ್ಥಾನದಲ್ಲಿ ಗಣಪತಿ ಹವನ ,ದೇವಸ್ಥಾನಕ್ಕೆ ತೆನೆ ತುಂಬಿಸುವುದು, ಭಕ್ತಾದಿಗಳಿಗೆ ತೆನೆ ವಿತರಣೆ , ವಲ್ಮಿಕ ರೂಪಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂತೋಷ್ ಕುಮಾರ್ ರೈ ನಳೀಲು , ಆಡಳಿತ ಮೊಕ್ತೇಸರರು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ










