ಲಗೋರಿ ಫ್ರೆಂಡ್ಸ್ ಅಮ್ಮುಂಜ ಸ್ವಾತಂತ್ರೋತ್ಸವ

0

ಪುತ್ತೂರು: ಲಗೋರಿ ಫ್ರೆಂಡ್ಸ್ ಕ್ಲಬ್ ಅಮ್ಮುಂಜ ಇದರ ವತಿಯಿಂದ 80ನೇ ವರ್ಷದ ಸ್ವಾತಂತ್ರೋತ್ಸವ ದಿನವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಅಶೋಕ್ ಗೌಡ ಬೇಕಲ್ ಧ್ವಜಾರೋಹಣವನ್ನು ನೆರವೇರಿಸಿದರು. ವೇದಿಕೆಯಲ್ಲಿ ತಂಡದ ಅಧ್ಯಕ್ಷರಾದ ಸುಕುಮಾರ ಗೌಡ, ಆರ್ಯಾಪು ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ರೇಖನಾಥ್ ರೈ ಮತ್ತು ಗ್ರಾಮದ ಹಿರಿಯರಾದ ಆಲಿಕುಂಞಿ ಆಸೀನರಾಗಿದ್ದರು.

 ಶಿಕ್ಷಕಿ ಶ್ರೀಮತಿ ಗೀತಾ ಪುಂಡರೀಕ ಸ್ವಾತಂತ್ರೋತ್ಸವ ಬಗ್ಗೆ ಮಹತ್ವವನ್ನು ತಿಳಿಸಿದರು ಮತ್ತು ಆರ್ಯಾಪು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ತಂಡದ ಸದಸ್ಯರಾದ ಹರೀಶ್ ಸಪಲ್ಯ, ಪ್ರವೀಣ್ ಗೌಡ, ಶಮಂತ್ ಗೌಡ,ತುಷಾರ್ ಶೆಟ್ಟಿ, ವಿಖ್ಯಾತ್ ಅಮ್ಮುಂಜ, ಕವಿತಾ ಗೌಡ, ರಕ್ಷಾ ಎಂ ಎಸ್, ಭವಾನಿ ಅಮ್ಮುಂಜ, ಅಕ್ಷಯ ಜ್ಯುವೆಲ್ಲರ್ಸ್ ಮಾಲಕರಾದ ರವಿಚಂದ್ರ ಆಚಾರ್ಯ ಕಂಬಳ್ತಡ್ಡ ಹಾಗೂ ಊರಿನ ಹಿರಿಯರಾದ ವಿಶ್ವನಾಥ ರೈ, ಜಯಶಂಕರ ರೈ, ಕೊರಗಪ್ಪ ರೈ, ಚಂದ್ರ ನಾಯ್ಕ್, ಇಬ್ರಾಹಿಂ ಅಮ್ಮುಂಜ, ಅಬೂಬಕ್ಕರ್, ಕರೀಂ, ಹೊನ್ನಪ್ಪ ನಾಯ್ಕ,  ಹಾಗೂ ಊರಿನ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here