






ಪಟ್ಟೆ ಬಡಗನ್ನೂರು: ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಒಂಬತ್ತನೆಯ ಮತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ಗಮಕ ವಾಚನ ಕಾರ್ಯಕ್ರಮ ಅ 19 ರಂದು ನಡೆಯಿತು. ಗಮಕಿಯಾಗಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಚಂದ್ರಶೇಖರ್ ಸುಳ್ಯಪದವು, ವ್ಯಾಖ್ಯಾನಕಾರರಾಗಿ ಅಪ್ಪಕುಂಞಿ ಯಾದವ್, ಹಾರ್ಮೋನಿಯಂ ವಾದಕರಾಗಿ ಸತೀಶ್ ಹೆಬ್ಬಾರ್ ಅಡೂರು ಭಾಗವಹಿಸಿದರು.



ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ ರವರು ಅತಿಥಿಗಳಿಗೆ ಶಾಲು ಹೊದೆಸಿ ಸ್ವಾಗತಿಸಿದರು, ಪ್ರೌಢಶಾಲಾ ಮುಖ್ಯ ಗುರುಗಳಾದ ಸುಮನಾ ಬಿ. ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಪ್ರೌಢ ಶಾಲೆಯ 9 ಮತ್ತು 10ನೆಯ ತರಗತಿ ವಿದ್ಯಾರ್ಥಿಗಳು ‘ಪಠ್ಯಾಧಾರಿತ ಗಮಕವಾಚನ’ದ ಪ್ರಯೋಜನವನ್ನು ಪಡೆದರು. ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕ ವಿಶ್ವನಾಥ್ ಬೊಳ್ಳಾಡಿ ಯವರು ಸ್ವಾಗತಿಸಿ, ವಂದಿಸಿದರು . ಪ್ರೌಢಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.













