






ಕಡಬ: ಕಡಬ ಒಕ್ಕಲಿಗ ಗೌಡ ಸೇವಾ ಸಂಘ ಪ್ರವರ್ತಿತ ಸ್ಪಂದನಾ ಸಮುದಾಯ ಸಹಕಾರ ಸಂಘ ಕಡಬ ಇದರ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಆದಿತ್ಯವಾರ ಹೊಸಮಠದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆ.23ರಂದು ನಡೆಯಿತು.
ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಮಾತೃ ಸಮಿತಿ ಅಧ್ಯಕ್ಷ ಸುರೇಶ್ ಬೈಲು, ಉಪಾಧ್ಯಕ್ಷ ಚೇತನ್ ಕುಮಾರ್ ಟಿ., ನಿರ್ದೇಶಕರಾದ ಆಶಾ ತಿಮ್ಮಪ್ಪ ಗೌಡ, ಗೀತಾ ಅಮೈ ಕೇವಳ, ಹಿರಿಯಣ್ಣ ಗೌಡ ಅಮೈ, ಶೇಖರ್ ಗೌಡ ಬರೆಪ್ಪಾಡಿ, ಲೋಕೇಶ್ ಸುಬ್ರಹ್ಮಣ್ಯ, ಚಂದ್ರಶೇಖರ ಸಣ್ಣಾರ, ದಾಮೋದರ ಚೆಕ್ಕಡ್ಕ, ಕಾಂತಪ್ಪ ಗೌಡ ಪೂವಾಜೆ, ಗೋಪಾಲ್ ಎಣ್ಣೆಮಜಲು,ರೋಹಿತ್ ಹೊಸೋಳಿಕೆ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ಸುರೇಶ್ ಪಿ.ಎ. ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ, ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಎಸ್ಕೆಪಿಎ ಬ್ರಹ್ಮಾವರದ ಛಾಯಾರತ್ನ ಪ್ರಶಸ್ತಿ ಪುರಸ್ಕೃತ ಲೋಕೇಶ್ ಬಿ.ಎನ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಬ್ಯಾಂಕಿನ ಗೌರವ ಸಲಹಾ ಸಮಿತಿ ಹಾಗೂ ಬಿಳಿನೆಲೆ ಶಾಖಾ ಸಲಹಾ ಸಮಿತಿ ಸದಸ್ಯರನ್ನು ಶಾಲು ಹೊದಿಸಿ ಗೌರವಿಸಲಾಯಿತು.



ಬ್ಯಾಂಕಿನ ಸಿಬ್ಬಂದಿ ವಿಜಿತ್ ಅವರು ಮಹಾಸಭೆಯ ತಿಳುವಳಿಕೆ ಪತ್ರವನ್ನು ಓದಿ ದಾಖಲಿಸಿದರು. ಶಿಲ್ಪಾ ಡಿ.ಎಸ್. ಅವರು 2025-26ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಬ್ಯಾಂಕಿನ ವ್ಯವಸ್ಥಾಪಕ ಸುರೇಶ್ ಬಿ.ಎ. ಅವರು 2025-26ನೇ ಸಾಲಿನ ಲೆಕ್ಕಪತ್ರಗಳನ್ನು ಮಂಡಿಸಿದರು.
ಉಪಾಧ್ಯಕ್ಷ ಚೇತನ್ ಕುಮಾರ್ ಟಿ. ಸ್ವಾಗತಿಸಿದರು. ನಿರ್ದೇಶಕ ಗೋಪಾಲ್ ಎಣ್ಣೆಮಜಲು ವಂದಿಸಿದರು. ಬ್ಯಾಂಕಿನ ಗೌರವ ಸಲಹಾ ಸಮಿತಿ ಸದಸ್ಯರು, ಒಕ್ಕಲಿಗ ಗೌಡ ಸೇವಾ ಸಂಘದ ಸ್ಥಾಪಕ ಸದಸ್ಯರು ಹಾಗೂ ಪದಾಧಿಕಾರಿಗಳು, ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಮಹಾಸಭೆಯಲ್ಲಿ ಉಪಸ್ಥಿತರಿದ್ದರು.













