ದರ್ಬೆ ಪ್ರಕರಣ : ಮೂರು ಬೇಡಿಕೆ ಮುಂದಿಟ್ಟು ಆ.31ಕ್ಕೆ ‘ಪುತ್ತೂರು ಚಲೋ’ ಪ್ರತಿಭಟನಾ ಮೆರವಣಿಗೆ ಸಮಾವೇಶ

0

ಪುತ್ತೂರಿನಲ್ಲಿ ವಿ.ಹಿ.ಪಂ, ಬಜರಂಗದಳ, ಹಿಂಜಾವೇ ಮುಖಂಡರ ಹೇಳಿಕೆ

ಪುತ್ತೂರು: ದರ್ಬೆಯಲ್ಲಿ ಆ.21ರಂದು ನಡೆದ ಘಟನೆಗೆ ಸಂಬಂಧಿಸಿ ಮೂರು ಪ್ರಮುಖ ಬೇಡಿಕೆ ಯನ್ನು ಮುಂದಿಟ್ಟು ನ್ಯಾಯ ಕೊಡಿಸುವಂತೆ ಆಗ್ರಹಿಸಿ ಆ.31ರಂದು ಪುತ್ತೂರು ಚಲೋ ಪ್ರತಿಭಟನಾ ಮೆರವಣಿಗೆ ಸಮಾವೇಶ ನಡೆಯಲಿದೆ ಎಂದು ವಿಶ್ವಹಿಂದು ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಬಜರಂಗದಳ ವಿಭಾಗ ಸಹಸಂಚಾಲಕ ಪುನಿತ್ ಅತ್ತಾವರ, ಹಿಂದು ಜಾಗರಣ ವೇದಿಕೆ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಅವರು ಜಂಟಿಯಾಗಿ ತಿಳಿಸಿದ್ದಾರೆ.


ದರ್ಬೆಯ ಘಟನೆಯಿಂದಾಗಿ ಗಾಯಗೊಂಡು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಾಗಿರುವ ಅಂಜನಾ ಪೈ ಅವರ ಆರೋಗ್ಯ ವಿಚಾರಿಸಲು ಬಂದಿದ್ದ ಅವರು ಮಾದ್ಯಮದೊಂದಿಗೆ ಮಾತನಾಡಿದರು. ಹಲ್ಲೆಗೊಳಗಾದ ಮಹಿಳೆಯನ್ನು ಭೇಟಿ ಮಾಡಲು ಇವತ್ತು ನಾವು ಬಂದಿದ್ದೇವೆ. ಇವತ್ತು ಹಿಂದು ಜಾಗರಣ ವೇದಿಕೆ ಕರೆಕೊಟ್ಟ ಸ್ವಯಂ ಪ್ರೇರಿತ ಬಂದ್‌ಗೆ ಹಿಂದು ಸಮಾಜ ಸಹಕಾರ ನೀಡಿದೆ. ಆದರೆ ಆ ತಾಯಿಗೆ ಹಲ್ಲೆ ಮಾಡಿದವರನ್ನು ಇಷ್ಟರವರೆಗೆ ಬಂಧನ ಮಾಡಿಲ್ಲ, ನಮ್ಮ ಆಗ್ರಹ ಇಷ್ಟೆ. ಅವರನ್ನು ಬಂಧಿಸಬೇಕು. ಈ ಘಟನೆಯ ಹಿಂದಿರುವ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರನ್ನು ಕೂಡಾ ತನಿಖೆ ಮಾಡಬೇಕು. ತಾಯಿಯ ರಕ್ಷಣೆಗೆ ಬಂದ ಅವರ ಮಗನ ಮೇಲೆ ಇವತ್ತು ಕೇಸು ದಾಖಲು ಮಾಡಿ, ಅವನ ಮೇಲೆ ಕೊಲೆ ಯತ್ನ ಕೇಸು ದಾಖಲು ಮಾಡಿ, ಅವನನ್ನು ಇವತ್ತು ಜೈಲಿಗೆ ಹಾಕಿದ್ದಾರೆ. ಅವನ ಮೇಲೆ ಹಾಕಿದಂತಹ 307 ಬಿಎನ್‌ಎಸ್ ಸೆಕ್ಷನ್ 109 ಸೆಕ್ಷನ್ ಅನ್ನು ಕೂಡ ತೆಗೆಯಬೇಕು ಎಂಬ ನಿಟ್ಟಿನಲ್ಲಿ ಆ.31ರ ಸೋಮವಾರ ಇಡೀ ಹಿಂದೂ ಸಮಾಜವನ್ನು ಒಟ್ಟು ಸೇರಿಸಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆ ಪುತ್ತೂರು ಇದರ ವತಿಯಿಂದ ‘ಪುತ್ತೂರು ಚಲೋ’ ಎಂಬ ಕಾರ್ಯಕ್ರಮವನ್ನು, ಬಹಳ ದೊಡ್ಡದಾದ ಒಂದು ಪ್ರತಿಭಟನೆಯನ್ನು ಪುತ್ತೂರಿನಲ್ಲಿ ನಾವು ನಡೆಸಲು ನಿರ್ಧಾರ ಮಾಡಿದ್ದೇವೆ. ಹಾಗಾಗಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಹಿಂದೂ ಸಮಾಜದ ಯುವಕರು, ಇಡೀ ಹಿಂದೂ ಸಮಾಜ, ಈ ಪುತ್ತೂರಿನ ವ್ಯಾಪಾರಸ್ಥರು, ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನೆಲ್ಲ ಬಂದು ಮಾಡುವಂತೆ ಕರೆ ಕೊಡುವುದಿಲ್ಲ. ಆದರೆ ಅವರೆಲ್ಲ ನಮ್ಮ ಪ್ರತಿಭಟನೆಯಲ್ಲಿ ಭಾಗವಹಿಸುಂತೆ ಮನವಿ ಮಾಡುತ್ತೇವೆ. ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಾಂತಾಧಿಕಾರಿಗಳು, ಹಿಂದು ಜಾಗರಣ ವೇದಿಕೆಯ ಪ್ರಾಂತ ಮಟ್ಟದ ಪ್ರಮುಖರು ಎಲ್ಲರೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದವರು ಹೇಳಿದರು.


ಸರಕಾರ ತುಷ್ಟೀಕರಣವನ್ನು ಮಾಡುತ್ತಿದೆ:
ಹಿಂದು ಜಾಗರಣ ವೇದಿಕೆ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಅವರು ಮಾತನಾಡಿ ದರ್ಬೆಯಲ್ಲಿ ನಡೆದ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಬಲವಾಗಿ ಖಂಡಿಸುತ್ತಾ ಇದೆ, ಅಂಜನಾ ಪೈ ಅವರನ್ನು ನೀಡಿದ ದೂರಿನ ತನಿಖೆಯಾಗಬೇಕು. ಅವರ ಕೈ ಮತ್ತು ಕಾಲಿಗೆ ಶಸ್ತ್ರಚಿಕಿತ್ಸೆಗೆ ಆಗಿದೆ. ಅಂಜನಾ ಪೈ ಅವರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ, ಕಾನೂನಿನ ಅಡಿಯಲ್ಲಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕು ಅನ್ನುವಂತಹ ಆಗ್ರಹವನ್ನು ಇಡೀ ಹಿಂದೂ ಸಮಾಜ ಆಗ್ರಹಿಸುತ್ತಾ ಇವತ್ತು ಸ್ವಯಂ ಪ್ರೇರಿತ ಬಂದ್ ಆಗಿದೆ. ಆದರೆ ಈ ಹೋರಾಟವನ್ನು ನಾವು ಇಲ್ಲಿಗೆ ಮುಕ್ತಾಯಗೊಳಿಸುವುದಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಕೂಡ ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ. ಯಾಕೆಂದರೆ ಸರಕಾರವು ಕೂಡ ಒಂದು ರೀತಿಯಲ್ಲಿ ತುಷ್ಟೀಕರಣವನ್ನು ಮಾಡ್ತಾ ಇದೆ. ಮುಂದಿನ ದಿನಗಳಲ್ಲಿ ಈ ಸಮಾಜದಲ್ಲಿ ಬದುಕಿ ಬಾಳಬೇಕಾದರೆ ನಾವು ರಸ್ತೆಗೆ ಇಳಿಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಇದ್ದಾಗ, ನಾವು ಇಳಿದೇ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು ಆ.31ರಂದು ಪುತ್ತೂರು ಚಲೋ ಅನ್ನುವಂತಹ ಹೆಸರಿನಲ್ಲಿ ಒಂದು ಜನಾಂದೋಲನವನ್ನು ವಿಶ್ವ ಹಿಂದೂ ಪರಿಷತ್ತು, ಬಜರಂಗಳ ಮತ್ತು ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ, ಇಡೀ ಹಿಂದೂ ಸಮಾಜದ ಪರಿವಾರ ಸಂಘಟನೆಗಳು ಎಲ್ಲರೂ ಸೇರಿ ನಡೆಯಲಿದೆ ಎಂದರು.

ವಿಶ್ವಹಿಂದು ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಹಿಂದು ಜಾಗರಣ ವೇದಿಕೆಯ ನರಸಿಂಹ ಮಾಣಿ, ವಿಶ್ವಹಿಂದೂ ಪರಿಷತ್‌ನ ನವಿನ್ ನೆರಿಯ, ದಾಮೋದರ್ ಪಾಟಾಳಿ, ಸಂತೋಷ್, ಹರೀಶ್ ದೋಳ್ಪಾಡಿ, ರವಿ ಶೆಟ್ಟಿ ಕಡಬ, ಅಜಿತ್ ರೈ ಹೊಸಮನೆ ಸಹಿತ ಹಲವಾರು ಮಂದಿ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಆ.31ರಂದು ಬೆಳಿಗ್ಗೆ 10.30ಕ್ಕೆ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ದರ್ಬೆ ವೃತ್ತದವರೆಗೆ ಸಾಗಲಿದೆ ಎಂದು ಸಂಘಟನೆಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಪೋಸ್ಟ್‌ರ್ ಹಾಕಿದ ಎಸ್‌ಡಿಪಿಐ ವಿರುದ್ಧವೂ ಪ್ರಕರಣ ದಾಖಲಾಗಲಿ
ಬಂದ್‌ಗೆ ಕರೆಕೊಟ್ಟ ಬಳಿಕ ನಾವು ಪತ್ರಿಕಾಗೋಷ್ಟಿ ಮಾಡಿದ್ದೆವು. ಅದಾದ ಮೇಲೆ ಸಾರ್ವಜನಿಕವಾಗಿ ಸೋಶಿಯಲ್ ಮೀಡಿಯಾದಲ್ಲಿ ನಾವು ಪೋಸ್ಟರ್‌ಗಳನ್ನು ಬಿಟ್ಟಿದ್ದೆವು. ಆದರೆ ಪೋಸ್ಟರ್ ಹಾಕಿದವರ ಮೇಲೆಯೇ ದೂರನ್ನು ದಾಖಲಿಸುತ್ತಾ ಇದ್ದಾರೆ, ಅವರ ಮೇಲೆನೇ ಎಫ್.ಐ.ಆರ್ ಹಾಕ್ತಾ ಇದ್ದಾರೆ. ಹಾಗಾದರೆ ನಮಗೆ ವಾಕ್ ಸ್ವತಂತ್ರ ಅನ್ನುವಂತದ್ದು ಇಲ್ವಾ ? ಈ ದೇಶದ ಕಾನೂನು ಮತ್ತು ಸಂವಿಧಾನ ನಮಗೆಲ್ಲವನ್ನು ಕೊಟ್ಟಿದೆ. ಅದರ ಹತ್ತಿಕ್ಕುವಂತಹ ಕೆಲಸವನ್ನು ಇವತ್ತು ಇಲಾಖೆ ಮಾಡ್ತಾ ಇದೆ. ಈ ನಡೆಯನ್ನು ಕೂಡ ನಾವು ಖಂಡಿಸುತ್ತಾ ಇದ್ದೇವೆ. ಇದರ ಜೊತೆಗೆ ಯಾರೋ ಎಸ್‌ಡಿಪಿಐ ಅವರು ಒಂದು ಪೋಸ್ಟರ್ ಅನ್ನು ಹಾಕಿ ‘ತಾಕತ್ತು ಇದ್ದರೆ ನೀವು ನಾಳೆ ಬಂದು ಮಾಡಿ’ ಅನ್ನುವಂತಹ ರೀತಿಯ ಒಂದು ಪೋಸ್ಟರ್ ಅನ್ನು ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಹಾಗಾದರೆ ಇವರ ಮೇಲೆ ಯಾಕೆ ಇವತ್ತು ಪೊಲೀಸ್ ಇಲಾಖೆ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ? ಅಂದ್ರೆ ಒಂದು ರೀತಿಯಲ್ಲಿ ಇವತ್ತಿನ ಇಲಾಖೆ ಯಾರದೋ ಒಂದು ಒತ್ತಡಕ್ಕೆ ಮಣಿದು, ಯಾರದೋ ಒಂದು ರಾಜಕೀಯ ಶಕ್ತಿಗೆ ಮಣಿದು ಈ ರೀತಿ ನಡೆ ಒಳ್ಳೆಯದಲ್ಲ. ಪೊಲೀಸ್ ಇಲಾಖೆ ಏನಿದೆ, ನೀವು ಸರಿಯಾದ ರೀತಿಯ ತನಿಖೆಯನ್ನು ಮಾಡಬೇಕು.

ಪ್ರಶಾಂತ್, ಪ್ರಾಂತ ಸಂಘಟನಾ ಕಾರ್ಯದರ್ಶಿ ಹಿಂದು ಜಾಗರಣ ವೇದಿಕೆ

LEAVE A REPLY

Please enter your comment!
Please enter your name here