







ಪುತ್ತೂರು: ಉತ್ತಮ ಗುಣಮಟ್ಟ, ಆಕರ್ಷಕ ವಿನ್ಯಾಸದ ಸ್ಟೀಲ್ ಡೋರ್ ಉತ್ಪಾದನೆಯ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿರುವ ಕಾಮಾಕ್ಷಿ ಸ್ಟೀಲ್ಸ್ ಸಂಸ್ಥೆಯ ಮಂಗಳೂರಿನ ಬೃಹತ್ ಶೋರೂಮ್ ಬಿಕರ್ನಕಟ್ಟೆಯಲ್ಲಿ ಶುಭಾರಂಭಗೊಂಡಿತು.



ಸಂಸ್ಥೆಯ ಮಾಲಕರಾದ ಸೌಮ್ಯಾ ಭಟ್, ಉಷಾ ವಿ.ಭಟ್, ಆನಂದ ಭಟ್ ಅವರು ಉದ್ಘಾಟನೆ ನೆರವೇರಿಸಿ ದೀಪ ಪ್ರಜ್ವಲನೆ ಮಾಡಿದರು. ಕ್ಯೂರಾಸ್ ಕಂಪೆನಿಯ ಎಂಡಿ ಸಲೀಂ, ಈಜಿಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಬ್ಯುಸಿನೆಸ್ ಮ್ಯಾನೇಜರ್ ರಾಫಿ ಮತ್ತಿತರರು ಈ ಸಂದರ್ಭ ಹಾಜರಿದ್ದರು.




15 ವರ್ಷಗಳ ಹಿಂದೆ ಸಂಸ್ಥೆಯನ್ನು ಆರಂಭಿಸಿದಾಗ ಮೊದಲ ಹತ್ತು ತಿಂಗಳಲ್ಲಿ ಒಂದು ಸ್ಟೀಲ್ ಡೋರನ್ನೂ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಕ್ರಮೇಣ ಜನರಿಗೆ ಪರಿಚಯವಾಗಿ, ಗುಣಮಟ್ಟದ ಉತ್ಪಾದನೆಯ ಮೇಲೆ ಭರವಸೆ ಮೂಡಿ ಈಗ ದ.ಕ. ಸುತ್ತಮುತ್ತಲಿನ ಆರೇಳು ಜಿಲ್ಲೆಗಳಲ್ಲಿ ಸ್ಟೀಲ್ ಡೋರ್ ಗಳಿಗೆ ಉತ್ತಮ ಬೇಡಿಕೆ ಇದೆ. ಪ್ರಸ್ತುತ ಪುತ್ತೂರು, ಉಡುಪಿಯ ಕಲ್ಸಂಕದಲ್ಲಿ ನಮ್ಮ ಸಂಸ್ಥೆಯ ಶೋರೂಮ್ ಇದೆ. ಇದೀಗ ಮಂಗಳೂರಿನಲ್ಲಿ ನೂತನ ಶೋರೂಮ್ ಆರಂಭಿಸಿದ್ದೇವೆ ಎಂದು ಆನಂದ ಭಟ್ ತಿಳಿಸಿದರು.

ಪ್ರಾಜೆಕ್ಟ್ಸ್ ಬಂದರೆ ಗೋವಾ, ಬೆಂಗಳೂರು ಮತ್ತಿತರ ಪ್ರದೇಶಗಳಿಗೂ ತೆರಳಿ ಸೇವೆ ನೀಡುತ್ತೇವೆ. ನಮ್ಮಲ್ಲಿ ರೆಸಿಡೆನ್ಶಿಯಲ್ ಸ್ಟೀಲ್ ಬಾಗಿಲುಗಳು ಮಾತ್ರವಲ್ಲ, ಇಂಡಸ್ಟ್ರಿಯಲ್ ಪರ್ಪಸ್ ಡೋರ್ ಗಳನ್ನೂ ತಯಾರಿಸುತ್ತೇವೆ ಎಂದು ಅವರು ಹೇಳಿದರು.











