






ಪುತ್ತೂರು: ನೆಲ್ಲಿಕಟ್ಟೆ ಈಶ ವಿದ್ಯಾಲಯದ ಸ್ಥಾಪಕರೂ, ಬೀರಾಮಲೆಹಿಲ್ಸ್ ರೋಟರಿಕ್ಲಬ್ ನ ಅಧ್ಯಕ್ಷರೂ ಆದoತಹ ಡಾ. ಗೋಪಾಲಕೃಷ್ಣರವರ ಮಾರ್ಗದರ್ಶನದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಈಶ ವಿದ್ಯಾಲಯದಲ್ಲಿ ನಡೆಸಲಾಯಿತು.


ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆನಂದ ಮತ್ತು ವಿನೋದಾ ಅವರ ಪುತ್ರನಾದ ನಿವೀಶ್ (ದ್ವಿತೀಯ ಪಿ.ಯು.ಸಿ., ವಾಣಿಜ್ಯ ವಿಭಾಗ) ಉಪಾಧ್ಯಕ್ಷರಾಗಿ ವಿಶ್ವನಾಥ ಮತ್ತು ಚೈತ್ರಾ ಅವರ ಪುತ್ರ ಸ್ವರೂಪ್ (ದ್ವಿತೀಯ ಪಿ.ಯು.ಸಿ., ವಾಣಿಜ್ಯ ವಿಭಾಗ) ಕಾರ್ಯದರ್ಶಿಯಾಗಿ ದಯಾನಂದ ಮತ್ತು ಶ್ಯಾಮಲಾ ಅವರ ಪುತ್ರ ಪುನೀತ್ (ದ್ವಿತೀಯ ಪಿ.ಯು.ಸಿ., ವಾಣಿಜ್ಯ ವಿಭಾಗ) ಜೊತೆ ಕಾರ್ಯದರ್ಶಿಯಾಗಿ ಬಾಬು ಮತ್ತು ಶಾಂತಿ ಅವರ ಪುತ್ರಿ ವೇದಾವತಿ (ಡಿ.ಎಂ.ಎಡ್. ವಿದ್ಯಾರ್ಥಿನಿ) ಇದರೊಂದಿಗೆ ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಸ್ವಚ್ಛತೆ, ಶಿಸ್ತು, ಸಾಂಸ್ಕೃತಿಕ ಹಾಗೂ ಕ್ರೀಡಾ ಸಚಿವರುಗಳನ್ನೂ ಆಯ್ಕೆ ಮಾಡಲಾಯಿತು.



ಆಯ್ಕೆಯಾದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರಾದ ಸುಶಾಂತಿ ಅವರು ಅಭಿನಂದಿಸಿ ಶುಭ ಹಾರೈಸಿದರು. ಡಿ.ಎಂ.ಎಡ್. ಉಪನ್ಯಾಸಕರಾದ ಎಂ. ಚಂದ್ರಶೇಖರ್ ಅವರು ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಪ್ರಾಂಶುಪಾಲರ ನಿರ್ದೇಶನದಂತೆ, ಸಂಸ್ಥೆಯ ಎಚ್.ಒ.ಡಿಯವರಾದ ಕಲೈವಾಣಿ, ಉಪನ್ಯಾಸಕರಾದ ಭೀಮಶಾಸ್ತ್ರಿ, ತ್ರಿವೇಣಿ ಹಾಗೂ ರೆಸೆಪ್ಶನಿಸ್ಟ್ ಅನುಶ್ರೀಚುನಾವಣೆಯ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಡೆಸಲು ಸಹಕರಿಸಿದರು.










